ರಾಜ್ಯಮಟ್ಟದ ಪುರುಷರ ಖೋ-ಖೋ: ಆಳ್ವಾಸ್ ಚಾಂಪಿಯನ್

Upayuktha
0


ವಿದ್ಯಾಗಿರಿ (ಮೂಡುಬಿದಿರೆ): ವಿಜಯನಗರದ ಕೊಟ್ಟೂರಿನಲ್ಲಿ ಜನವರಿ 19 ರಿಂದ 21ರ ವರೆಗೆ ನಡೆದ ರಾಜ್ಯ ಮಟ್ಟದ ಪುರುಷರ ಹಾಗೂ 18 ವರ್ಷ ವಯೋಮಿತಿ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದೆ. 


ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದಿದ್ದರೆ, ದಾವಣಗೆರೆಯ ಡಿವೈಇಎಸ್ ಕಾಲೇಜು ದ್ವಿತೀಯ, ಬೆಂಗಳೂರಿನ ವೈಪಿಎಸ್‌ಸಿ ಕಾಲೇಜು ತೃತೀಯ ಹಾಗೂ ಭದ್ರಾವತಿಯ ಸರ್ ಎಂ. ವಿ. ಕಾಲೇಜು ಚತುರ್ಥ ಸ್ಥಾನವನ್ನು ಪಡೆದಿದ್ದಾರೆ 


ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕಾವೇರಿ ಕಪಿಲ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಆಳ್ವಾಸ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಬೆಂಗಳೂರಿನ ಬಿಸಿವೈಎ ತೃತೀಯ ಹಾಗೂ ಖ್ಯಾತನಹಳ್ಳಿಯ ಕೆಕೆಓ ತಂಡ ನಾಲ್ಕನೇ ಸ್ಥಾನ ಪಡೆಯಿತು. 


ಆಳ್ವಾಸ್ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top