ಮಂಗಳೂರು: ಮಂಗಳೂರಿನ ನೃತ್ಯ ಸಂಸ್ಥೆ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನಿರ್ದೇಶನದಲ್ಲಿ ವಿಕಸನ ಎಂಬ ಸಮೂಹ ನೃತ್ಯವು ಡಾನ್ ಬಾಸ್ಕೋ ಸಭಾಂಗಣದಲ್ಲಿ ಇದೇ 28 ರಂದು ಭಾನುವಾರ ಸಂಜೆ 6 ಗಂಟೆಗೆ ಜರಗಲಿದೆ.
ಪ್ರಸಿದ್ಧ ಹಿಮ್ಮೇಳ ಸಂಗೀತದೊಂದಿಗೆ ನಡೆಯುವ ಈ ಸರಣಿ ಕಾರ್ಯಕ್ರಮವು ಪ್ರತಿಭಾನ್ವಿತ ಕಲಾವಿದೆಯರಿಗೆ ವೇದಿಕೆಯನ್ನು ನೀಡುವ ಯೋಜನೆ ಇದಾಗಿದೆ. ಸಂಸ್ಥೆಯ 8 ಯುವ ಕಲಾವಿದರ ನೃತ್ಯ ಪ್ರಸ್ತುತಿಗೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಶ್ರೀ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಶ್ರೀ ಹರ್ಷ ಸಾಮಗ ಬೆಂಗಳೂರು, ಶ್ರೀ ಸಬ್ಬರಾಮನ್ ಪಾಲಕ್ಕಾಡ್ ಹಾಗೂ ಶ್ರೀ ನಿತೀಶ್ ಅಮ್ಮಣ್ಣಯ ಬೆಂಗಳೂರು ಇವರು ಸಹಕಾರ ನೀಡಲಿದ್ದಾರೆ. ಅತಿಥಿಗಳಾಗಿ ಹಿರಿಯ ಕಲಾ ವಿಮರ್ಶಕಿ ವಿದುಷಿ ಪ್ರತಿಭಾ ಸಾಮಗ ಹಾಗೂ ಬೆಂಗಳೂರಿನ ಹೆಸರಾಂತ ನೃತ್ಯ ಗುರು ಶ್ರೀ ಸತ್ಯನಾರಾಯಣ ರಾಜು ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಿಗೆ ಮುಕ್ತ ಅವಕಾಶವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
