ಜ. 26: ಗೋವಿಂದ ದಾಸ ಕಾಲೇಜಿನಲ್ಲಿ ಗಾನ ಶಾರದೆಗೆ ನಮನ ಕಾರ್ಯಕ್ರಮ

Upayuktha
0



ಸುರತ್ಕಲ್ :  ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ - ಹೊಸಬೆಟ್ಟು ಮತ್ತು ಲಲಿತಕಲಾ ಸಂಘ, ಗೋವಿಂದ ದಾಸ ಕಾಲೇಜುಗಳ ಸಹಯೋಗದಲ್ಲಿ ವಿದುಷಿ  ಭಾರತಿ ಸುರೇಶ್, ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ - ಹೊಸಬೆಟ್ಟು ಇವರ ನಿರ್ದೇಶನದಲ್ಲಿ ಖ್ಯಾತ ಸಂಗೀತಗಾರ್ತಿ ದಿ. ಶೀಲಾ ದಿವಾಕರ್ ಅವರಿಗೆ ಅರ್ಪಿಸುವ ಗಾನ ಶಾರದೆಗೆ ನಮನ-ಗುರುವಿಗೊಂದು ನಾಟ್ಯನಮನ ಕಾರ್ಯಕ್ರಮವು ಜ. 26 ಶುಕ್ರವಾರ ಸಂಜೆ 6.00 ಗಂಟೆಯಿಂದ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. 




ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ., ಅಧ್ಯಕ್ಷತೆ ವಹಿಸಲಿದ್ದು,  ಕಲ್ಕೂರ ಪ್ರತಿಷ್ಠಾನ, ಮಂಗಳೂರಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.  ಅಗರಿ ಸಮೂಹ ಸಂಸ್ಥೆಗಳ ಮಾಲಕರಾದ ಅಗರಿ ರಾಗವೇಂದ್ರ ರಾವ್ ನುಡಿನಮನ ಸಲ್ಲಿಸಲ್ಲಿದ್ದಾರೆ.




ಕಲಾವಿದರಾದ ವಿದುಷಿ ಪ್ರಣತಿ ಸತೀಶ್, ವಿದುಷಿ ಪೂರ್ಣಿಮಾ ತೇಜಸ್ ರಾನಡೆ, ವಿದುಷಿ ವೈಷ್ಣವಿ ಡಿ., ವಿದುಷಿ ದೀಪಾಲಿ ಡಿ.ಕೆ.,  ಅಮೃತಾ ರಾವ್, ಶ್ರದ್ಥಾ ಎಂ., ಚಿನ್ಮಯೀ ಎಸ್. ರಾವ್, ತನ್ಮಯ್ ಸುರೇಶ್ ನೃತ್ಯ ನಮನ ಸಲ್ಲಿಸಲಿದ್ದಾರೆ. ಗುರು ವಿದುಷಿ ಭಾರತಿ ಸುರೇಶ್, ವಿದುಷಿ ರಜನಿ ವರುಣ್ ಗೋರೆ, ವಿದ್ವಾನ್ ಕೆ. ಬಾಲಚಂದ್ರ ಭಾಗವತ್, ವಿದ್ವಾನ್ ಪಿ.ಶ್ರೀಧರ ಆಚಾರ್ ಪಾಡಿಗಾರ್, ಮಧು ಕುಮಾರ್ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಲಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top