ಬೆಂಗಳೂರು : ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉನ್ನತ ತರಬೇತಿ ಕಾರ್ಯಾಗಾರ

Upayuktha
0



ಬೆಂಗಳೂರು: ‘ಶಕಲ ಯಂತ್ರ ಕಲಿಕೆ’ ಅಂದರೆ ‘ಕ್ವಾಂಟಂ ಮೆಶಿನ್ ಲರ್ನಿಂಗ್’ ಮತ್ತು ‘ಕೃತಕ ಬುದ್ದಿಮತ್ತೆ’ ಕುರಿತಂತೆ ತಂತ್ರಜ್ಞರು ತೀವ್ರವಾಗಿ ಗಮನಿಸಬೇಕಾದ ಅಗತ್ಯತೆ ಇದೆ. ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯೇ ನಡೆಯಲಿದೆ’, ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ನುಡಿದರು. 



ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ‘ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆ’ ಹಾಗೂ ‘ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಅಧ್ಯಾಪಕ ಸಾಮಥ್ರ್ಯ ಅಭಿವೃದ್ಧಿ ಕುರಿತಾದ ಉನ್ನತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.




ಅಟಲ್ ಎಫ್.ಡಿ.ಪಿ ಯೋಜನೆಯನ್ವಯ ನಡೆಯುತ್ತಿರುವ ಈ ಮಹತ್ವದ ತರಬೇತಿ ಶಿಬಿರಕ್ಕೆ ತಮಿಳುನಾಡು, ಆಂಧ್ರ ಪ್ರದೇಶ, ಗೋವಾ ಹಾಗೂ ಇತರೆ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಸಂಶೋಧಕರು ಪಾಲ್ಗೊಂಡಿದ್ದರು.




ಬಾಸನ್‍ಕ್ಯೂ ಪಿಎಸ್‍ಐ, ಮ್ಯಾಥ್‍ವಕ್ರ್ಸ್ ಹಾಗೂ ಸುಧಾರಿತ ವೈಜ್ಞಾನಿಕ ಸಂಶೋಧನೆಗಳಿಗೆ ಮೀಸಲಾದ ಜವಾಹರ್‍ಲಾಲ್ ನೆಹರು ಕೇಂದ್ರಗಳಿಂದ ಆಗಮಿಸಿದ್ದ ತಂತ್ರಜ್ಞರು ತಮ್ಮ ಅರಿವನ್ನು ಇತರರೊಡನೆ ಹಂಚಿಕೊಂಡರು. ಇದರಿಂದ ಆಧುನಿಕ ತಂತ್ರಜ್ಞಾನದ ಪ್ರಾಯೋಗಿಕ ಅಳವಡಿಕೆಗೆ ಸೂಕ್ತ ವೇದಿಕೆ ಸೃಷ್ಟಿಯಾಗಿತ್ತು.




ಕೃತಕ ಬುದ್ದಿಮತ್ತೆ ಹಾಗೂ ಯಂತ್ರ ಕಲಿಕೆ ವಿಭಾಗದ ಮುಖ್ಯಸ್ಥ ಡಾ. ಪಿಯೂಷ್ ಕುಮಾರ್ ಪರೀಕ್ ಹಾಗೂ ಇತರೆ ಅಧ್ಯಾಪಕರು ಉಪಸ್ಥಿತರಿದ್ದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top