ಉಡುಪಿ: ವಿದ್ಯೋದಯ ಶಾಲೆಯಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಅಂಗವಾಗಿ ಮಕ್ಕಳಿಂದ ರಾಮತಾರಕ ಜಪ , ಪ್ರಾರ್ಥನೆ ಭಜನೆ ದೀಪೋತ್ಸವಗಳು ನಡೆದವು.
ಅಯೋಧ್ಯೆಯ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಯವರು ದಿನದ ಔಚಿತ್ಯ ಮತ್ತು ಅಯೋಧ್ಯೆ ಜನ್ಮಭೂಮಿ ಹೋರಾಟ ಸಾಗಿ ಬಂದ ದಾರಿಯ ಕುರಿತು ಉಪನ್ಯಾಸ ನೀಡಿ ಈ ಅಮೃತಘಳಿಗೆಯಿಂದ ನಾವೆಲ್ಲ ಸ್ವಾಭಿಮಾನ ವೃದ್ಧಿಸಿಕೊಂಡು ಸಮರ್ಥ ಹಿಂದೂ ಮತ್ತು ಶ್ರೇಷ್ಠ ಭಾರತೀಯರಾಗಿ ಬದುಕುವ ಸಂಕಲ್ಪತೊಡಗಬೇಕೆಂದರು. ಮಕ್ಕಳಿಗೆ ಬಾಕರಾಮವ ವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಅನೇಕ ಮಕ್ಕಳು ಬಾಲರಾಮನ ವೇಷ ತೊಟ್ಟು ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಬಲ್ಲಾಳ ಕಾರ್ಯದರ್ಶಿ ಗಣೇಶ ರಾವ್ ಕೋಶಾಧಿಕಾರಿ ಪದ್ಮರಾಜ್ , ಪ್ರಾಂಶುಪಾಲೆ ಅನಿತಾ ರಾಜ್ , ಇತರೆ ವಿಭಾಗಗಳ ಮುಖ್ಯೋಪಾಧ್ಯಾಯರುಗಳಾದ ಸಂಧ್ಯಾ ಕಾರ್ನಾಡ್ , ಬಿಬಜಿ ಶಶಿರೇಖಾ , ಶಿಕ್ಷಕ ವೃಂದದವರಿದ್ದರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


