ಪೆರ್ಮುದೆ : ಅಯೋಧ್ಯೆ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮೋತ್ಸವ-2024 ಜನವರಿ 22 ಸೋಮವಾರ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರ್ಮುದೆ ಯಲ್ಲಿ ಜರಗಿತು.
ದೀಪ ಪ್ರಜ್ವಲನೆ, ಭಜನೆ, ರಾಮತಾರಕ ಜಪ, ಅಯೋಧ್ಯೆ ಕರ ಸೇವಾಕರ್ತ ಕೃಷ್ಣ ಟೈಲರ್ ಪೆರ್ಮುದೆ, ಬಿ ಯಸ್ ಭಾಸ್ಕರ ರೈ ಬೆಟ್ಟಂಪಾಡಿ, ಗುತ್ತು ಮತ್ತು ರಾಮಮಂದಿರ ರಥಯಾತ್ರೆಯಲ್ಲಿ ಭಾಗವಹಿಸಿದ 15 ಮಂದಿ ಕಾರ್ಯಕರ್ತರಿಗೆ ಗೌರವಾರ್ಪಣೆ ಹಾಗೂ ಅಯೋಧ್ಯೆಯ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆ ಅನ್ನ ಸಂತರ್ಪಣೆಯ ಕಾರ್ಯಕ್ರಮದೊಂದಿಗೆ ಪೆರ್ಮುದೆ ಘಟಕದಲ್ಲಿ ನಡೆಯಿತು.
ಸಭಾಕಾರ್ಯಕ್ರಮದಲ್ಲಿ ತಿಮ್ಮಪ್ಪ ಬಾಳಿಕೆ ಸ್ವಾಗತಿಸಿ. ಕೃಷ್ಣ ಟೈಲರ್ ಇವರು ತಮ್ಮ ಜೀವನ ಆದ ಅಯೋಧ್ಯೆ ಯ ಕರಸೇವೆಯ ಅನುಭವ ಹಂಚಿಕೊಂಡರು ತುಕ್ರ ಪೆರಿಯಡ್ಕ ಇವರು ಧನ್ಯವಾದ ನೀಡಿದರು ಕಾರ್ಯಕ್ರಮದಲ್ಲಿ ಪೆರ್ಮುದೆ ಘಟಕ ಸದಸ್ಯರಾದ ಕೇಶವ ಪ್ರಸಾದ ಎಡಕ್ಕಾನ, ಕೃಷ್ಣ ಕಿಶೋರ ಅಮ್ಮಂಕಲ್ಲು, ಹರಿಣಾಕ್ಷ ಪೆರಿಯಡ್ಕ, ಪೆರ್ಮುದೆ ಭಜನಾ ಸಂಘದ ಪ್ರಮುಖ, ಮಾತೃ ಸಂಘದ ಸದಸ್ಯರ ಸಹಕಾರದೊಂದಿಗೆ ಅಯೋಧ್ಯೆಯ ಬಾಲರಾಮನ ಪ್ರತಿಷ್ಠೆಯು ಉತ್ತಮವಾಗಿ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


