ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಎಲ್ಲಾ ಬ್ರಾಹ್ಮಣ ಸಂಘಟನೆಗಳನ್ನೊಳಗೊಂಡ ಒಂದು ರಾಜ್ಯವ್ಯಾಪಿ ಸಂಘಟನೆಯಾಗಿದ್ದು ಈಗಾಗಲೇ ರಾಜ್ಯದಲ್ಲಿ ಬ್ರಾಹ್ಮಣರ ವಿರುದ್ಧ ನಡೆಯುವ ಷಡ್ಯಂತ್ರಗಳಿಗೆ ಅವಮಾನಗಳಿಗೆ ಸೂಕ್ತ ಉತ್ತರ ಕೊಡುತ್ತಿದ್ದು, ಇದೀಗ ದ. ಕ ಜಿಲ್ಲೆಯಲ್ಲಿ ಜಿಲ್ಲಾ ಸಂಘಟನೆಯನ್ನು ಮೊದಲಬಾರಿಗೆ ಅಸ್ತಿತ್ವಕ್ಕೆ ತರಲಾಯಿತು.
ರಾಜ್ಯ ಉಪಾದ್ಯಕ್ಷರದ ನ್ಯಾಯವಾದಿ ಮಹೇಶ್ ಕಜೆಯವರ ಶಿಫಾರಸಿನಂತೆ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರು ಜಿಲ್ಲಾ ಪ್ರಧಾನ ಸಂಚಾಲಕರಾಗಿ ಭರತಾಂಜಲಿಯ ಶ್ರೀಧರ ಹೊಳ್ಳ , ಸಂಚಾಲಕರಾಗಿ ಕದ್ರಿ ಕೃಷ್ಣ ಭಟ್, ಸಹ ಸಂಚಾಲಕರಾಗಿ ರಾಜೇಂದ್ರ ಕಲ್ಬಾವಿ, ನ್ಯಾಯವಾದಿ ಪುರುಷೋತ್ತಮ ಭಟ್, ಕಾಶಿಮಠ ಗಣೇಶ್ ಭಟ್,ಹರ್ಷ ಕುಮಾರ್ ಕೇದಿಗೆ, ಪದ್ಮಾ ಭಿಡೆ, ನರಸಿಂಹ ಕುಲಕರ್ಣಿ, ಶಂಕರಮೂರ್ತಿ, ಕಾರ್ಯಸಂಚಾಲಕರು ಎಂ.ಟಿ.ಭಟ್ ಸಮನ್ವಯಕಾರರು ಸಿ ಎ ಅರ್.ಡಿ.ಶಾಸ್ತ್ರಿ ಮೊದಲಾದವರನ್ನು ಶ್ರೀ ಕ್ಷೇತ್ರ ಕಟೀಲಿನಲ್ಲಿ ಜರಗಿದ ಶ್ರೀ ರಾಮ ನಾಮ ತಾರಕ ಹೋಮದ ಕೊನೆಯಲ್ಲಿ ಶ್ರೀ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಆಯ್ಕೆ ಪತ್ರ ನೀಡಿ ಹರಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಸಂಚಾಲಕ ಪೊಳಲಿ ಗಿರಿಪ್ರಕಾಶ್ ತಂತ್ರಿ, ಯುವ ಸಂಘಟನೆಯ ಜಿಲ್ಲಾ ಸಂಚಾಲಕ ವಿದ್ವಾನ್ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ,ರಾಜ್ಯ ಯುವ ಘಟಕ ಸಹ ಸಂಚಾಲಕ ಸುಬ್ರಹ್ಮಣ್ಯ ಕೊರಿಯರ್, ಸದಸ್ಯರಾದ ಶ್ರೀಕರ ದಾಮ್ಲೆ, ಹರಿಪ್ರಸಾದ್ ಪೇರಿಯಾಪು, ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್, ವೇ.ಮೂ ವೆಂಕಟ್ರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ವಿದ್ವಾನ್ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹಾಗೂ ಜಿಲ್ಲೆಯ ಬ್ರಾಹ್ಮಣ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


