ರಾಮ ಮಂದಿರ ನಿರ್ಮಾಣ ಪ್ರಯುಕ್ತ ನಿಟ್ಟೆ ಪರಪ್ಪಾಡಿಯ ಶ್ರೀಕೇಶವ ಭಜನಾ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ

Upayuktha
0



ಕಾರ್ಕಳ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಂಡಿದ್ದು ಜ.22 ರ ಸೋಮವಾರದಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. 


ಅದರ ಪ್ರಯುಕ್ತ ನಿಟ್ಟೆಯ ಪರಪ್ಪಾಡಿಯಲ್ಲಿರುವ ಶ್ರೀಕೇಶವ ಭಜನಾ ಮಂದಿರದಲ್ಲಿ ಅದೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ಶ್ರೀರಾಮನಾಮ ಜಪ, ರಾಮರಕ್ಷಾಸ್ತೋತ್ರ ಪಠಣ, ಹನುಮಾನ್ ಚಾಲಿಸ ಪಠಣ, ಕುಣಿತ ಭಜನೆ ಹಾಗೂ ಸಂಜೆ 5:30 ರಿಂದ ಯಕ್ಷಗಾನ ತಾಳಮದ್ದಳೆ 'ಶ್ರೀ ರಾಮ ಪಟ್ಟಾಭಿಷೇಕ' ಕು. ಸಿಂಚನ ಮೂಡುಕೋಡಿ ಭಾಗವತಿಕೆಯಲ್ಲಿ, ಉಜಿರೆ ಅಶೋಕ ಭಟ್ ರವರ ಸಾರಥ್ಯದಲ್ಲಿ, ಸದಾಶಿವರಾವ್ ನೆಲ್ಲಿಮಾರು ಇವರ ನೇತೃತ್ವದಲ್ಲಿ ಭಜನಾ ಮಂಡಳಿಯ ಸಂಯೋಜಕತ್ವದಲ್ಲಿ ನಡೆಯಲಿರುವುದು ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಭಜನಾ ಮಂಡಳಿಯ ಸಂಚಾಲಕ ಎನ್.ಸುರೇಶ್ ಭಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top