ಕ್ರಿಶ್ಚಿಯನ್ ಸ್ಪೋರ್ಟ್ಸ್ ಎಸೋಸಿಯೇಷನ್ ವತಿಯಿಂದ ಆಯೋಜನೆ
ಮಂಗಳೂರು: ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರಿಶ್ಚಿಯನ್ ಸ್ಪೋರ್ಟ್ಸ್ ಎಸೋಸಿಯೇಷನ್ ಇವರ ವತಿಯಿಂದ ಜ.14ರಂದು ಪೂರ್ವಾಹ್ನ 9 ಗಂಟೆಗೆ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದೆ. ಇದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ, ಕ್ರಿಶ್ಚಿಯನ್ ಸಮುದಾಯದವರ ಮಧ್ಯೆ ನಡೆಯುವ ಚೊಚ್ಚಲ ಪಂದ್ಯವಾಗಿದೆ.
ಒಟ್ಟು 6 ತಂಡಗಳಿದ್ದು ಆಲ್ವಿನ್ ಪಿಂಟೊ ಮಾಲಕತ್ವದ ಉಡುಪಿಯ ರೊಯ್ ರೊಕರ್ಸ್, ವಲೇರಿಯನ್ ಪಾಯ್ಸ್ ಮಾಲಕತ್ವದ ಪಾಯ್ಸ್ ಶಟಲಾರ್ಸ್, ಜೆಸ್ಸನ್ ಮೋರಸ್ ಮಾಲಕತ್ವದ ಸ್ಪೋರ್ಟ್ಸ್ ಗ್ಯಾರೇಜ್, ಲವೀನಾ ಪಿಂಟೊ ಮಾಲಕತ್ವದ ರೆಡ್ ಇಂಡಿಯನ್ಸ್, ಸುನಿತಾ ಡಿಸೋಜ ಮಾಲಕತ್ವದ ಶಟಲ್ ಬ್ಲೋಕರ್ಸ್, ರೋಹನ್ ಡಿಸಿಲ್ವಾ ಮಾಲಕತ್ವದ ಸ್ಟೆಲ್ಲರ್ ಸ್ಮ್ಯಾಶರ್ಸ್. ಪ್ರತಿ ತಂಡದಲ್ಲಿ 19 ಮಂದಿ ಆಟಗಾರರು ಇರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ