ಮಂಡ್ಯ: ಜನತೆಗೆ ನೂತನ ವರ್ಷದ ಶುಭ ಕೋರಲು ಹೊಸ ವರ್ಷ 2024 ಹಾಗೂ ಸಾಹಿತಿ ಡಾ. ಶಂಕರ ಹಲ್ಲಗೆರೆ ರಚಿತಾ ಕವನ ಸಂಕಲನ ಬಿಡುಗಡೆ ಮತ್ತು ಸಾಂಸ್ಕೃತಿಕ- ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ನಿವೃತ್ತ ಜೀವ ವಿಮೆ ಅಧಿಕಾರಿ ಡಾಕ್ಟರ್ ಎಸ್. ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಮಂಡ್ಯ ನಗರದಲ್ಲಿರುವ ಶ್ರೀ ವಿದ್ಯಾ ಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ ಮಂಡ್ಯ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಸಹನಾ ಸೇಲ್ಸ್ ಅಂಡ್ ಸರ್ವಿಸಸ್ ಹೀರೋ ಎಲೆಕ್ಟ್ರಿಕಲ್ ಅಂಡ್ ಮೋಟಾರ್ಸ್ ಮತ್ತು ಇನ್ನಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಕ್ರಮವನ್ನು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ನಿಂಗರಾಜ ಗೌಡ ಗಣ್ಯರೊಂದಿಗೆ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಡಾ. ಶಂಕರ ಅಲೆಗೆರೆ ರಚಿತಾ ಗೆಲುವು ನಗಬೇಕು ಮತ್ತು ಕಿನ್ನರ ಲೋಕ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಂಜಿನಿ ಕಲಾವೇದಿಕೆ ಅಧ್ಯಕ್ಷ ಗಮಕ ವಿದ್ವಾನ್ ಸಿ.ಪಿ ವಿದ್ಯಾಶಂಕರ್, ಕಲಾ ಪೋಷಕ ಬಿ ಎಂ ಅಪ್ಪಾಜಪ್ಪ, ವೈದ್ಯರಾದ ಡಾಕ್ಟರ್ ಚಂದ್ರಶೇಖರ್ ಮನೋವೈದ್ಯರಾದ ಡಾ. ಟಿ.ಎಸ್ ಸತ್ಯನಾರಾಯಣ ರಾವ್, ಕ್ರೀಡಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪಿಎಂ ಸೋಮಶೇಖರ್, ಯುವ ಮುಖಂಡ ವಿನಯ್ ಕುಮಾರ್ ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು, ಗಮಕ ವಿದುಷಿ ದರಿತ್ರಿ ಆನಂದ ರಾವ್ ಮತಿತರರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ