ಹಾಸನ: ಶ್ರೀ ವಿವೇಕಾನಂದ ವಿದ್ಯಾಲಯದಲ್ಲಿ ವಿವೇಕಾನಂದರ 161ನೇ ಜನ್ಮದಿನೋತ್ಸವ ಹಾಗೂ 46ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವು ಜ 12 ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಘಟಕ, ದೊಡ್ಡ ಮಠ, ಅರಕಲಗೂಡು. ಇವರು ವಹಿಸಿದ್ದು. ವಿವೇಕಾನಂದರ ಜೀವನಶೈಲಿ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ಮರಿಸುತ್ತಾ. ಹಲವು ವಿಚಾರಗಳನ್ನು ತಿಳಿಸಿದರು. ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಎಂತಹ ಒಳ್ಳೆಯ ಕಾರ್ಯ ಮಾಡಿ ಹೋದೆವು ಎಂಬುದು ಮುಖ್ಯ ಎಂದು ತಿಳಿಸಿದರು. ಈ ಶಾಲೆಯಲ್ಲಿ ವಿಶೇಷವೆಂದರೆ ವಿವೇಕಾನಂದರ ಜನ್ಮದಿನದಂತೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ವಿಶೇಷವಾದದ್ದು ಎಂದರು.
ಅಧ್ಯಕ್ಷತೆಯನ್ನು ಎಂ. ಎಸ್. ಶ್ರೀಕಂಠಯ್ಯ ವಹಿಸಿದ್ದು, ತಮ್ಮದೇ ಆದ ಗುಣಗಳನ್ನು ಒಳಗೊಂಡ ಮಕ್ಕಳು ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಮುಖಾಂತರ ಉತ್ತಮ ಪ್ರಜೆಯಾಗಬಹುದೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ದಿನೇಶ್ ಬೈರೇಗೌಡ ಮಕ್ಕಳ ತಜ್ಞರು, ಸಮಾಜ ಸೇವಕರು, ಮಣಿ ಆಸ್ಪತ್ರೆ. ಇವರು ಮಕ್ಕಳಿಗೆ ಆಹಾರ ಪದ್ಧತಿಗಳಲ್ಲಿ ಬದಲಾವಣೆಯಾಗಬೇಕು. ಮನೆಯಲ್ಲೇ ತಯಾರಿಸಿದ ಆಹಾರವನ್ನು ನೀಡಿ. ಉತ್ತಮ್ಮ ಪೋಷಕಾಂಶದ ಆಹಾರ ನೀಡಿ ಮಕ್ಕಳ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.
ಬಿ.ಎ ಮಂಜುನಾಥ್ (ಇ.ಸಿ.ಒ ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಹಾಸನ. ಇವರು ಮಕ್ಕಳಿಗೆ ಅತಿಯಾದ ಮುದ್ದುಸಲ್ಲದು ಶಿಸ್ತುಬದ್ಧ ಜೀವನ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ಮುಂದಿನ ಪೀಳಿಗೆಯ ಉತ್ತಮ ಪ್ರಜೆಗಳಾಗಲು ದಾರಿದೀಪವಾಗುತ್ತದೆ. ಒಳ್ಳೆಯ ಸಂಸ್ಕಾರ ಬೇಕು. ಉತ್ತಮ ವಿದ್ಯಾಭ್ಯಾಸದ ಕಡೆ ಗಮನವಿರಬೇಕು. ಮಕ್ಕಳು ಮುಂದಿನ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮ ಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಹಾರಮೇಳದ ಕಾರ್ಯಕ್ರಮದಲ್ಲಿ ವ್ಯಾಪಾರದ ನೀತಿ ಅರಿತ ಮಕ್ಕಳು. ಮನೆಯಲ್ಲೇ ಮಾಡಿಕೊಂಡು ಬಂದ ಉತ್ತಮ ಇದು ವಿದ್ಯಾರ್ಥಿಗಳಿಗೆ " ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ"ದ ವತಿಯಿಂದ ಸಾಹಿತಿ ಮತ್ತು ಸಮಾಜದ ಸೇವಕಿ ಹೆಚ್. ಎಸ್. ಪ್ರತಿಮಾ ಹಾಸನ್ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪಾಧ್ಯಾಯ ಪಾರ್ಥಸಾರಥಿ 2023 -24ರ ಸಾಲಿನ ಶಾಲಾ ವರದಿಯನ್ನು ತಿಳಿಸಿದರು. ಕಾರ್ಯಕ್ರಮವನ್ನು ವೆಂಕಟೇಶ್ ಹೆಚ್ ಪಿ ರವರು ನಿರ್ವಹಣೆ ಮಾಡಿದರು. ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ಕಾರ್ಯಕ್ರಮದಲ್ಲಿ ಶುಭ ಮಂಗಳ, ಶೇಖರ್, ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪೋಷಕರು, ಸಾರ್ವಜನಿಕರು, ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ