ಅಂಬಿಕಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Upayuktha
0


ಪುತ್ತೂರು:
ಇತರರ ದುಃಖಕ್ಕೆ ಪರಿತಪಿಸುವುದೂ ಸನ್ಯಾಸತ್ವ. ಸನ್ಯಾಸಿಯಾದವನು ಸಮಾಜದಿಂದ ಬೇರೆ ಇರಬಾರದು. ಜನರ ಜೊತೆಗಿರಬೇಕು, ಜನರಿಗಾಗಿ ಸನ್ಯಾಸಿಯ ಜ್ಞಾನ, ಹಸಿದವರಿಗೆ ಅನ್ನ ಕೊಡುವುದೇ ನಿಜವಾದ ಧರ್ಮ. ದಾಸ್ಯದ ಮದಿರೆಯನ್ನು ಕುಡಿದು ಅಮಲು ಅಥವಾ ನಿದ್ರೆಯಲ್ಲಿದ್ದು ತನ್ನ ಅಸ್ತಿತ್ವವನ್ನು ಮರೆತ ಭಾರತೀಯರನ್ನು ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಚೇತೋಹಾರಿ ಮಾತುಗಳಿಂದ ಬಡಿದೆಬ್ಬಿಸಿ ಕರ್ತವ್ಯದ ಕಡೆಗೆ ಮುನ್ನಡೆಸಿದ ಪರಿ. ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ತುಂಬಾ ಎತ್ತರ ಅದನ್ನರಿತು ನಡೆದಾಗ ದೇಶದ ಏಳಿಗೆ ಸಾಧ್ಯ ಎಂದು ವಿವೇಕಾನಂದರ ದಿವ್ಯ ಸಂದೇಶವನ್ನು ಖ್ಯಾತವಾಗ್ಮಿ, ಅಂಕಣಕಾರ ಪ್ರಕಾಶ ಮಲ್ಪೆ ಹೇಳಿದರು. 




ಅವರು ಪುತ್ತೂರಿನ ನಟ್ಟೋಜ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಕರ್ತವ್ಯ, ಜಾಗೃತಿ, ಭಾರತೀಯ ಸಂಸ್ಕೃತಿಯ ಮಹತ್ವ, ಅಂತರ್ ದೃಷ್ಟಿ -ಬಹಿರ್ ದೃಷ್ಟಿಯ ಅಂತರ, ಸಂತೋಷ ಮತ್ತು ಆನಂದದ ಅರ್ಥವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು, ಹಾಗೂ ರಾಮಕೃಷ್ಣ ಪರಮಹಂಸ, ಸ್ವಾಮಿ ರಾಮತೀರ್ಥರ ವಿಚಾರಧಾರೆಗಳನ್ನು ಅರುಹಿದರು.




 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡುತ್ತಾ ವಿವೇಕಾನಂದರು ಸ್ತ್ರೀಯರಿಗೆ ತುಂಬಾ ಗೌರವ ಕೊಟ್ಟಿದ್ದಾರೆ, ನಾವೂ ಭಾರತೀಯತೆಯನ್ನು ಸಾಧಿಸಬೇಕಾಗಿದೆ . ಭಾರತಮಾತೆಯನ್ನು ಮಾತೆ ಎಂದು ಕರೆಯುವಂತೆ ಸ್ತ್ರೀ ಸಮಾಜವನ್ನೂ ಮಾತೆ ಎಂದೇ ಗೌರವಿಸುತ್ತೇವೆ. ಅವಳ ಆತ್ಮದಲ್ಲಿರುವ ಶಕ್ತಿಗೆ ನಮಿಸೋಣ. ನಾರಿಯರೂ ತಮ್ಮ ಗೌರವವನ್ನು ಉಳಿಸಿಕೊಂಡು ಮುಂದುವರಿಯಬೇಕು. ಆಸೆಯೇ ದುಃಖಕ್ಕೆ ಮೂಲ. ಸದ್ವಿಚಾರಗಳನ್ನು, ದೈವೀ ಭಾವನೆಗಳನ್ನು ಮನದಲ್ಲಿ ತುಂಬಿಕೊಂಡಾಗ, ಆತ್ಮ ಸಾಕ್ಷಾತ್ಕಾರ ಹೊಂದಿದಾಗ, ಸನ್ಮಾರ್ಗದಲ್ಲಿ ನಡೆದಾಗ  ಭಾರತಕ್ಕೆ ಗೌರವ ಸಿಗುವುದು. ಭಾರತೀಯತೆಯನ್ನು ಪ್ರಪಂಚದಲ್ಲೆಲ್ಲಾ ಪಸರಿಸಿ ಪ್ರಸಿದ್ಧರಾಗೋಣ ಎಂದು ಹಾರೈಸಿದರು.




ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಜ್ಞಾ ಪ್ರಾರ್ಥಿಸಿ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ ಕಾರ್ಯಕ್ರಮ ನಿರೂಪಿಸಿದರು, ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top