ಎಂಸಿಎಫ್‌ ಸಿಎಸ್‌ಆರ್ ಉಪಕ್ರಮ: ಕೃತಕ ಮಂಡಿಜೋಡಣೆ, ವೀಲ್‌ ಚೇರ್‌ ಸಲಕರಣೆಗಳ ವಿತರಣೆ

Upayuktha
0

ಶಾಸಕ ಡಾ. ಭರತ್ ಶೆಟ್ಟಿ ಅವರ ಶಿಫಾರಸಿನಂತೆ ಎಂಸಿಎಫ್‌ನಿಂದ ಜನೋಪಯೋಗಿ ಕಾರ್ಯ



ಮಂಗಳೂರು: ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರ ಶಿಫಾರಸ್ಸಿನಂತೆ ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಅಂಗಾಂಗ ವಿತರಣೆ, ಶ್ರವಣ ಸಾಧನ  ಸಲಕರಣೆಗಳ ವಿತರಣೆ  ಮಂಗಳವಾರ ಎಂಸಿಎಫ್ ಸಭಾಂಗಣದಲ್ಲಿ ಜರಗಿತು.

ಶಾಸಕ ಡಾ.ಭರತ್ ಶೆಟ್ಟಿ ವೈ, ಸುರತ್ಕಲ್ ಅಥರ್ವ ಆಸ್ಪತ್ರೆಯ ಡಾ.ಪ್ರಶಾಂತ್ ಮೋಹನ್ ಅವರು ಫಲಾನುಭವಿಗಳಿಗೆ ಕೃತಕ ಅಂಗಾಂಗ ಜೋಡಣಾ ಸಲಕರಣೆ ವಿತರಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಐದು ವರ್ಷಗಳಲ್ಲಿ ಅಗತ್ಯವುಳ್ಳವರಿಗೆ ಅಂತರಾಷ್ರ್ಟೀಯ ಗುಣಮಟ್ಟದ ಕೃತಕ ಅಂಗಾಂಗ ಜೋಡಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಎಂಸಿಎಫ್ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದರು.



ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಟ್ರೋಲಿ, ಆಮ್ಲಜನಕ ಉತ್ಪಾದನಾ ಘಟಕ ಸೇರಿದಂತೆ ವಿವಿಧ ಸಹಾಯ, ಸಹಕಾರ ಮತ್ತು ಅಭಿವೃದ್ಧಿ ಕಾರ್ಯಗಳು ನಡೆದಿವೆ ಸಂಸ್ಥೆಗೆ ಈ ಸಂದರ್ಭದಲ್ಲಿ ಕೃತಜ್ಞತೆ ಅರ್ಪಿಸುವುದಾಗಿ ಶಾಸಕರು ನುಡಿದರು. 



ಎಂಸಿಎಫ್‍ನ ಸಿಇಒ ಆಗಿರುವ ನಿತಿನ್ ಎಂ. ಕಂಟಕ್ ಅವರು ಮಾತನಾಡಿ, ಸಿಎಸ್‍ಆರ್ ನಿಧಿಯಡಿ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥ ಗಿರೀಶ್ ಎಸ್. ಅವರು ಸಿಎಸ್‍ಆರ್ ಯೋಜನೆಯ ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಮನಪಾ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ,ಎಂಸಿಎಫ್‍ನ ಪ್ರಮುಖ ಅಧಿಕಾರಿಗಳು, ಸಿಎಸ್‍ಆರ್ ವಿಭಾಗದ ಅಧಿಕಾರಿಗಳು, ಎಂಡೋಲೈಟ್ ಸಂಸ್ಥೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು. ಎಂಸಿಎಫ್ ಸಂಸ್ಥೆಯ ಡಾ.ಯೋಗೀಶ್ ನಿರೂಪಿಸಿದರು. ಚೇತನ್ ಮೆಂಡೋನ್ಸಾ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top