ಸುರತ್ಕಲ್: ಕುಳಾಯಿ ಕೋಡಿಕೆರೆಯಲ್ಲಿರುವ ಇಸ್ಕಾನ್ ಭಕ್ತಿ ಪಂಥ ಮಂಗಳೂರು ಶ್ರೀಶ್ರೀ ರಾಧಾ ಗೋವಿಂದ ದೇವಸ್ಥಾನ ವತಿಯಿಂದ ಕೊರೊನಾ ಸಂದರ್ಭ ಸುಮಾರು ಹತ್ತು ಲಕ್ಷ ಮಂದಿಗೆ ಭಗವದ್ಗೀತಾ ಉಪನ್ಯಾಸ, ಕಲಿಕೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಭಾಗವಹಿಸಿ ಶುಭಕೋರಿದರು.
ಹಿಂದೂ ಸಮಾಜದ ಭದ್ರ ಬುನಾದಿಗೆ ಭಗವದ್ಗೀತೆ ಉಪನ್ಯಾಸದ ಮೂಲಕ ವಿಶೇಷ ಕೊಡುಗೆಯನ್ನು ಪ್ರಪಂಚದಾದ್ಯಂತ ನೀಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.
ಮೇಯರ್ ಸುಧಿರ್ ಶೆಟ್ಟಿ ಕಣ್ಣೂರು, ಉದ್ಯಮಿ ರವೀಂದ್ರನಾಥ ಶೇಟ್, ಮನಪಾ ಸದಸ್ಯರಾದ ವರುಣ್ ಚೌಟ, ವೇದಾವತಿ, ಇಸ್ಕಾನ್ ಸಂಸ್ಥೆಯ ನಾಮನಿಷ್ಠ ದಾಸಪ್ರಭು ಪಾಲ್ಗೊಂಡಿದ್ದರು. ಸಚ್ಚಿದಾನಂದ ಪ್ರಭು ಅವರು ಸ್ವಾಗತಿಸಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ