ಮಂಗಳೂರು: ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ 300 ಕ್ಕೂ ಅಧಿಕ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾಡಿದ ಕರ್ನಾಟಕದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಸಾಧಾರಣ ವೈದ್ಯಕೀಯ ವೃತ್ತಿಪರರು, ವೈದ್ಯಕೀಯ ತಂಡ ಅಚಲವಾದ ಸಮರ್ಪಣೆ ಮತ್ತು ಪಾಲುದಾರಿಕೆಯ ಪ್ರಯತ್ನಗಳ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಮುಖ್ಯ ಯಕೃತ್ ಕಸಿ ತಜ್ಞ ಡಾ. ಸುರೇಶ್ ರಾಘವಯ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮುಖ್ಯ ಹೆಪಟಾಲಜಿಸ್ಟ್ ತಜ್ಞ ಡಾ. ಸಿ.ಕೆ. ಆದರ್ಶ್, ಪ್ರಮುಖ ಯಕೃತ್ ಕಸಿ ಶಸ್ತ್ರಚಿಕಿತ್ಸಕ ಡಾ.ಪ್ರದೀಪ್ ಕೃಷ್ಣ ಅವರು ತಂಡದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
"ಇದು 300 ಯಶಸ್ವಿ ಯಕೃತ್ ಕಸಿಗಳಿಗೆ ದಾರಿ ಮಾಡಿಕೊಟ್ಟಿದೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮಾನದಂಡವನ್ನು ಸ್ಥಾಪಿಸಲು ತಂಡದ ಪ್ರತಿಯೊಬ್ಬ ಸದಸ್ಯರ ಸಮರ್ಪಣೆ ಮತ್ತು ಬದ್ಧತೆಯಿಂದ ಇದು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.
ಈ ಸಾಧನೆಯು ನಮ್ಮ ವೈದ್ಯಕೀಯ ವೃತ್ತಿಪರರ ಪರಿಣತಿಯನ್ನು ಮಾತ್ರವಲ್ಲದೆ ನಮ್ಮ ರೋಗಿಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯ ಹೆಪಟಾಲಜಿಸ್ಟ್ ತಜ್ಞ ಡಾ. ಪ್ರಮೋದ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ