ಕುಳಾಯಿ: ಕುಳಾಯಿ ಇಲ್ಲಿನ ಗೋಕುಲನಗರ ನಿವಾಸಿಗಳ ಸಂಘ(ರಿ)ಇದರ 24 ನೇ ವಾರ್ಷಿಕೋತ್ಸವವು ನಡೆಯಿತು. ಕುಳಾಯಿ ವಾರ್ಡಿನ ಕಾರ್ಪೊರೇಟರ್, ವೇದಾವತಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಗೋಕುಲನಗರದ ನಿವಾಸಿಗಳು ನಗರ ಪಾಲಿಕೆಯೊಂದಿಗೆ ಸಹಕಾರ ನೀಡಿದ ಪರಿಣಾಮವಾಗಿ ಅಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದರು.
ನಿವೃತ್ತ ವಾಯು ಸೇನಾಧಿಕಾರಿ ಎಂ ಜೆ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದು ಮಾತನಾಡಿದರು. ಯುವ ಜನತೆ ಮೊಬೈಲು ಮಾಧ್ಯಮಗಳ ದಾಸರಾಗದೆ ತಮ್ಮ ಜವಾಬ್ದಾರಿ ಅರಿತುಕೊಂಡು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು. ಗೋಕುಲನಗರ ಇದಕ್ಕೊಂದು ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ನೆಲೆಯಲ್ಲಿ ಸಾವಿತ್ರಿ ಎಸ್ ರಾವ್ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕಿ ಡಾ.ಶ್ರೀಮಧು ಇವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ಗೋಕುಲ್ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಪ್ರತೀಕ್ ಎಸ್ ರಾವ್ ಸ್ವಾಗತಿಸಿದರು.
ರೇಖಾ ವಿಶ್ವನಾಥ ವಾರ್ಷಿಕ ವರದಿ ವಾಚಿಸಿದರು. ಸಂಘದ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ದಿವಾಕರ್ ಪದಾಧಿಕಾರಿಗಳಾದ ಕಿರಣ್ ಪೆರುವಾಜೆ, ರವಿ ಉಪಾಧ್ಯಾಯ, ಮುರಳಿಧರನ್ ಟಿ, ಪ್ರವೀಣ್ ಶೆಟ್ಟರ್, ಚಂದ್ರಾ ಸುರೇಶ್, ವಿದ್ಯಾ ಹರೀಶ್, ಗೀತಾ ಪ್ರದೀಪ್, ಮಮತಾ ಜಯರಾಮ್, ವನಿತಾ ರಾವ್, ನಳಿನಿ ಕರ್ಕೇರ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಡಾ.ಶೈಲಜಾ ಶಿವರಾಂ ಭಟ್ ವಂದಿಸಿ, ಶೈಲಜಾ ಪುದುಕೋಳಿ ನಿರೂಪಿಸಿದರು. ಅಪೂರ್ವ ಮತ್ತು ಸಂಧ್ಯಾ ಮನೋರಂಜನಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


