'ಪುರ್ಸ ಕಟ್ಟುನ' ಸಾಕ್ಷ್ಯಚಿತ್ರ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಆಯ್ಕೆ

Upayuktha
0



ಮಂಗಳೂರು: ಡಾ. ಸುಂದರ ಕೇನಾಜೆ ಚಿತ್ರಕತೆ-ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿರುವ "ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ" ಸಾಕ್ಷ್ಯಚಿತ್ರ ಮತ್ತೆ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಬಾರಿ ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ. ಭಾಗವಹಿಸಿದ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ 326 ರಲ್ಲಿ ಒಂದಾಗಿ ಆಯ್ಕೆಯಾದ ಇದು ಈ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಅತೀ ಹೆಚ್ಚು ಭಾಗವಹಿದ ದಾಖಲೆಯಲ್ಲಿ ಅರ್ಹತೆ ಪಡೆದಿದೆ.



ಇದೇ ಫೆಬ್ರವರಿ 11ರಿಂದ 15 ವರೆಗೆ ಈ ಚಲನಚಿತ್ರೋತ್ಸವವು ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು  ಜೈಪುರದ ನಾನಾ ಕಡೆ ಇದರ ಪ್ರದರ್ಶನ, ಚರ್ಚೆ, ಸಂವಾದಗಳೂ ನಡೆಯಲಿವೆ. ಜೈಪುರ ಸಾಹಿತ್ಯೋತ್ಸವದ ನಂತರ ಈ ಚಲನಚಿತ್ರೋತ್ಸವ ನಡೆಯಲಿದೆ. ಈ ಸಾಕ್ಷ್ಯ ಚಿತ್ರವನ್ನು ವಿಕಿಮೀಡಿಯ ಪೌಂಢೇಶನ್, CIS A2K  ಮತ್ತು ಕರಾವಳಿ ವಿಕಿಮೀಡಿಯನ್ ಯೂಸರ್ಸ್ ಗ್ರೂಪ್‌ನ  ಸಹಕಾರದಿಂದ  ತಯಾರಿಸಲಾಗಿ ಅಂತರಜಾಲಕ್ಕೆ ಬಿಡುಗಡೆ ಮಾಡಲಾಗಿದೆ.



ಇದು ಈಗಾಗಲೇ ತ್ರಿಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅರ್ಹತೆ ಪಡೆದು 5 ದಿನಗಳ ಕಾಲ ಪ್ರದರ್ಶನ, ಗೋಷ್ಠಿ, ಚರ್ಚೆಗಳಿಗೆ ಒಳಪಟ್ಟಿತು ಈ ಗೋಷ್ಠಿಗಳಲ್ಲಿ ನಿರ್ದೇಶಕರಾದ ಡಾ. ಸುಂದರ ಕೇನಾಜೆ ಭಾಗವಹಿಸಿ ವಿಚಾರ ಮಂಡಿಸಿದ್ದರು ಎಂದು ನಿರ್ಮಾಪಕರಾದ ಭರತೇಶ ಅಲಸಂಡೆಮಜಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



https://youtu.be/GRHyySTtCe4



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top