ವಿರಾಟ್ ಕೃಷಿ ಋಷಿ ಸಮಾವೇಶದಲ್ಲಿ ಅದಮಾರು ಶ್ರೀಗಳು
ಕೊಲ್ಲಾಪುರ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠ ಶ್ರೀ ಸಿದ್ಧಗಿರಿ ಸಂಸ್ಥಾನ , ಕನ್ಹೇರಿ ಕೊಲ್ಲಾಪುರ ಇಲ್ಲಿ ಇತ್ತೀಚೆಗೆ ಭೂತಾಯ ಕಾಯಕಕೆ ಧರ್ಮ ಕಾಯ್ವರ ಧರ್ಮ ಕಾಯ್ವರ ಹೆಗಲು ಎಂಬ ವಿರಾಟ್ ಕೃಷಿ ಋಷಿ ಸಮಾವೇಶದಲ್ಲಿ ಉಡುಪಿ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪಾಲ್ಗೊಂಡು ದಿವ್ಯ ಸಂದೇಶ ನೀಡಿದರು.
ದೇಶದ ವಿವಿಧ ರಾಜ್ಯಗಳಿಂದ ನೂರಾರು ಸಾಧು ಸಂತರು , ಕೃಷಿಕರು , ಕೃಷಿ ವಿಜ್ಞಾನಿಗಳು , ಸಂಶೋಧಕರು ಪಾಲ್ಗೊಂಡು ದೇಶದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಸಾವಯವ ಕೃಷಿ , ದೇಶೀ ಗೋಸಾಕಣೆ ಸಮೃದ್ಧ ಸ್ವಚ್ಛ ,ಅಪರಾಧ ಮುಕ್ತ ಗ್ರಾಮ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಕಾರ್ಯಗಳಿಗೆ ವೇಗ ನೀಡುವ ಕುರಿತಾಗಿ ಗಂಭೀರ ಚರ್ಚೆ ನಡೆಸಿದರು. ಇಡೀ ಸಮಾವೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ,ಶಿಸ್ತು ಬದ್ಧವಾಗಿ , ಕಿಂಚಿತ್ತೂ ಲೋಪದೋಷಗಳಿಲ್ಲದೆ ಸಂಯೋಜಿಸಲಾಗಿತ್ತು ಎಂದು ಭಾಗವಹಿಸಿದ್ದ ಕರ್ನಾಟಕ ಕರಾವಳಿ ಮಲೆನಾಡು ಜಿಲ್ಲೆಗಳ ಕೃಷಿಕರು ಬಣ್ಣಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


