ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಚಿತ್ರಾಪುರದ ರಂಗ ಮಂದಿರ ಉದ್ಘಾಟನೆ

Upayuktha
0



ಚಿತ್ರಾಪುರ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ  ಕಲ್ಪಿಸಿ ಕೊಡುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ. ಸಮಾಜ ಸೇವೆಯ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಪರಿವರ್ತನೆ ಹಾಗೂ ಸಾಮರಸ್ಯವನ್ನು ತರುವಲ್ಲಿ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆ ಶ್ರಮಿಸುತ್ತಿದ್ದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಲಯನ್ಸ್ ಇಂಟರ್‍ನ್ಯಾಶನಲ್ ಜಿಲ್ಲೆ 317-ಡಿ ಇದರ ಗವರ್ನರ್ ಲಯನ್  ಡಾ. ಮೆಲ್ವಿನ್ ಡಿ’ಸೋಜಾ ನುಡಿದರು. 



ಅವರು ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317 ಡಿ ಇದರ ವಲಯ-1 ರ ಪ್ರಾಂತೀಯ ಸಮ್ಮೇಳನ ‘ಸ್ಮಯನ್’ನ ಸವಿನೆನಪಿಗೆ ಚಿತ್ರಾಪುರ ಕುಳಾಯಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ (ಫಿಶರೀಸ್)ಗೆ ಕೊಡುಗೆಯಾಗಿ ನೂತನವಾಗಿ ನಿರ್ಮಿಸಿರುವ ರಂಗ ಮಂದಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.



ಪ್ರಾಂತೀಯ -1ರ ಪ್ರಾಂತೀಯ ಅಧ್ಯಕ್ಷೆ ಉಷಾ ಮನೋಜ್ ಮಾತನಾಡಿ ಸರಕಾರಿ ಶಾಲೆಯ ಅವಶ್ಯಕತೆಯಾಗಿದ್ದ ರಂಗ ಮಂದಿರದ ನಿರ್ಮಾಣದ ಶಾಶ್ವತ ಯೋಜನೆಯಿಂದ ವಿದ್ಯಾರ್ಥಿಗಳ ಕಲಾ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಲಭಿಸಿದೆ ಎಂದರು.



ಮುಖ್ಯ ಅತಿಥಿ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಪಿ. ಮಾತನಾಡಿ ಸಾಮಾಜಿಕ ಸೇವಾ ಸಂಸ್ಥೆಗಳು ಶೈಕ್ಷಣಿಕ ಸಂಸ್ಥೆಗಳ ಅವಶ್ಯಕತೆಗೆ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ನವ ಮಂಗಳೂರು ಲಯನ್ಸ್ ಕ್ಲಬ್‍ನ ಸಾರಥ್ಯದಲ್ಲಿ ಶಾಲೆಗೆ ನೀಡಿರುವ ಕೊಡುಗೆ ವಿಶಿಷ್ಟವಾದುದು ಎಂದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಹಾಗೂ ಮಾಜಿ ಉಪಮೇಯರ್ ವೇದಾವತಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ, ಶಾಲಾ ಹಿರಿಯ ಶಿಕ್ಷಕಿ ಸುಕೇಶಿನಿ ಹಾಗೂ ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ್ ರಾವ್ ಶುಭ ಹಾರೈಸಿದರು.



ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಲ. ಸುಧಾಕರ ಶೆಟ್ಟಿ, ವಲಯಾಧ್ಯಕ್ಷ ಲ.ಸುಜಿತ್ ಸಾಲ್ಯಾನ್, ಬೈಕಂಪಾಡಿ ಯೂನಿಯನ್ ಬ್ಯಾಂಕ್‍ನ ಮ್ಯಾನೇಜರ್ ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ನವಮಂಗಳೂರಿನ ಕಾರ್ಯದರ್ಶಿ ಟಿ. ಕೆ. ಮುರಳೀಧರನ್, ನಿರ್ದೇಶಕ ಅನಿಲ್ ಕುಮಾರ್, ನೂರ್ ಜಹಾನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಭರತ್ ಕುಮಾರ್, ಉಪಾಧ್ಯಕ್ಷ ದೇವದಾಸ್ ಕುಳಾಯಿ, ಸದಸ್ಯ ತೇಜ್‍ಪಾಲ್, ಲೋಕೇಶ್ ಅಮೀನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಜುಳಾ, ಮಾಜಿ ಅಧ್ಯಕ್ಷ ಸಚಿನ್ ಮತ್ತಿತರರು ಉಪಸ್ಥಿತರಿದ್ದರು.



ಅತಿಥೇಯ ಕ್ಲಬಾದ ಲಯನ್ಸ್ ಕ್ಲಬ್ ನವ ಮಂಗಳೂರು ಇದರ ಅಧ್ಯಕ್ಷ ಅಬೂಬಕ್ಕರ್ ಕುಕ್ಕಾಡಿ ಸ್ವಾಗತಿಸಿದರು. ಪ್ರಾಂತೀಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ ಯೋಜನೆಯ ವಿವರಗಳಿತ್ತರು. ಪ್ರಾಂತೀಯ ಸಮ್ಮೇಳನದ ಜೊತೆ ಕಾರ್ಯದರ್ಶಿ ಸಿ. ಜೀವನ್ ಬೆಳ್ಳಿಯಪ್ಪ ವಂದಿಸಿದರು. ಪ್ರಾಂತೀಯ ಸಮ್ಮೇಳನದ ಕಾರ್ಯದರ್ಶಿ ಗಣೇಶ್ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಮನೋಜ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top