ಸುರತ್ಕಲ್: ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು, ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ, ಕರಾವಳಿ ಲೇಖಕರ ವಾಚಕಿಯರ ಸಂಘ, ದಕ್ಷಿಣ ಕನ್ನಡ ಜಿಲ್ಲೆ (ರಿ), ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು, ಸುರತ್ಕಲ್ ಇವರ ಸಂಯುಕ್ತ ಅಶ್ರಯದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಬುಡಕಟ್ಟು ಯುವ ಬರಹಗಾರರ ಕಮ್ಮಟದ ಸಮಾರೋಪ ಸಮಾರಂಭವು ಶಿಬಿರಾರ್ಥಿಗಳ ಅನುಭವದ ಹಂಚಿಕೆಯೊಂದಿಗೆ ಮೂಡಿ ಬಂತು. ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮಾತನಾಡಿ ಶಿಬಿರಾರ್ಥಿಗಳು ತಮ್ಮ ಬರೆಯುವ ಹವ್ಯಾಸದ ಜೊತೆಗೆ ಬದುಕನ್ನು ಉನ್ನತೀಕರಿಸುವ ನೆಲೆಯಲ್ಲಿ ಶ್ರಮಿಸುವುದನ್ನು ಮರೆಯಬಾರದು. ನಮ್ಮನ್ನು ಅರೋಗ್ಯವಂತ ಮನಸ್ಥಿತಿಯಲ್ಲಿ ಇಡಲು ಸಾಹಿತ್ಯ ಸಹಕರಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾದ ಶಂಶುದ್ದೀನ್ , ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ, ಕಮ್ಮಟದ ನಿರ್ದೇಶಕರಾದ ಡಾ. ಸಬಿತಾ ಗುಂಡ್ಮಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾರು, ಸಮಗ್ರ ಗ್ರಾಮೀಣ ಆಶ್ರಮದ ಆಡಳಿತ ಮಂಡಳಿಯ ಸದಸ್ಯೆಯರಾದ ದೇವಿಕಾ ನಾಗೇಶ್, ಕೋಶಾಧಿಕಾರಿಯಾದ ಪದ್ಮ ವೇಣೂರು, ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಅಕ್ಷತಾ ವಿ., ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಮ್ಮಟದ ನಿರ್ದೇಶಕಿಯಾದ ಡಾ. ಸಬಿತಾ ಗುಂಡ್ಮಿ ಕಮ್ಮಟದ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿ ಭವಿಷ್ಯದ ನಡೆಯ ಬಗ್ಗೆ ರೂಪು ರೇಷೆಗಳ ಕುರಿತು ಮಾತನಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ