ಜ.22: ಬೆಂಗಳೂರು ಸರಸ್ವತಿನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಜನೆ

Upayuktha
0



ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಟನಾ ಸಮಾರಂಭದ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸರಸ್ವತಿನಗರ, ವಿಜಯನಗರ, ಬೆಂಗಳೂರಿನಲ್ಲಿ ಜ. 22 ಸೋಮವಾರ ಬೆಳಗ್ಗೆ ಅಭಿಷೇಕ, ಹೂವಿನ ಅಲಂಕಾರ, ಕೆಂಗೇರಿಯ ಚಂದ್ರಿಕಾ ಭಜನಾ ಮಂಡಳಿ, ಪ್ರಶಾಂತನಗರದ ಶ್ರೀ ಗುರುರಾಜ ಭಜನಾ ಮಂಡಳಿ, ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಸದಸ್ಯರುಗಳಿಂದ ಹರಿಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.




ಸಂಜೆಯ ಕಾರ್ಯಕ್ರಮದಲ್ಲಿ 5-30ಕ್ಕೆ ವೈಷ್ಣವಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾಮೃತ, ದೀಪೋತ್ಸವ, ಮೆರವಣಿಗೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. 



Post a Comment

0 Comments
Post a Comment (0)
Advt Slider:
To Top