ಪುಣೆ: ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾನ ನಿಮಿತ್ತ ಹೊರಟ ಪುಣ್ಯ ಕಲಶ, ತಾರೀಖು 30/12/2023 ಯಂದು ಪುಣೆಯ ವಾರಿಜೆ ಮಾಲವಾಡಿಯಲ್ಲಿ ಇರುವ ಜ್ಞಾನೇಶ್ವರ ಹೌಸಿಂಗ್ ಸೊಸೈಟಿಗೆ ಬಂದು ತಲುಪಿತು. ಹೌಸಿಂಗ್ ಸೊಸೈಟಿಯಲ್ಲಿ ಇರುವ ನಿವಾಸಿಗಳು ಬಹಳ ಆದರದಿಂದ ಬರಮಾಡಿಕೊಂಡು ಸೊಸ್ಯೆಟಿಯ ಮಧ್ಯೆ ಇರುವ ಶ್ರೀ ಸೂರ್ಯಮುಖಿ ಗಣೇಶ ಮಂದಿರದಲ್ಲಿ ದರ್ಶನಕ್ಕಾಗಿ ಇರಿಸಿದರು.
ಸಂಜೆಯ ವೇಳೆ ಸೊಸ್ಯೆಟಿಯ ನಿವಾಸಿಗಳಾದ, ಹೆಂಗಳೆಯರು/ ಮಕ್ಕಳು ಯುವಕರು/ ಜೇಷ್ಠ ನಾಗರಿಕರು ಎಲ್ಲರೂ ಬಹಳ ಉತ್ಸಾಹದಿಂದ ಭಕ್ತಿಯಿಂದ ಸೊಸ್ಯೆಟಿಯ ಎಲ್ಲಾ ರಸ್ತೆಗಳಲ್ಲಿ ಕಲಶವನ್ನು ಹೊತ್ತುಕೊಂಡು, ಡೋಲು, ತಾಶೆಗಳನ್ನು ಬಾರಿಸುತ್ತಾ, ಕುಣಿದು ಕುಪ್ಪಳಿಸಿ ಮೆರವಣಿಗೆಯನ್ನು ಮಾಡುತ್ತಾ ಪುನಃ ಮಂದಿರದ ಮಧ್ಯೆ ರಚಿಸಿದ ಪೀಠದಲ್ಲಿ ಇರಿಸಿ ಎಲ್ಲರಿಗೂ ದರ್ಶನ ಮಾಡುವ ಅವಕಾಶವನ್ನು ಮಾಡಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ