ಡಾ ಜಯಪ್ರಕಾಶ್ ಪುತ್ತೂರು ಇವರ ಮೊಗಸಾಲೆ ಕೃತಿಯನ್ನು ಡಾ. ಮುರಲೀ ಮೋಹನ್ ಚೂoತಾರು ಲೋಕಾರ್ಪಣೆ

Upayuktha
0



ಪುತ್ತೂರು: ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಿ ಆರ್ ಓ ಆಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ  ಜಯಪ್ರಕಾಶ್ ಪುತ್ತೂರು ಇವರ 7ನೇ ಕೃತಿ ದಶಕದ ಸಾಹಿತ್ಯದ ಮೊಗಸಾಲೆಯಲ್ಲಿ ಕೃತಿಯನ್ನು ಕ ಸಾ ಪಾ ಬೆಂಗಳೂರು ಇದರ ಸಲಹಾ ಸಮಿತಿಯ ಸದಸ್ಯರಾದ ಡಾ. ಮುರಲೀ ಮೋಹನ್ ಚೂoತಾರು ಅವರು ಲೋಕಾರ್ಪಣೆ ಮಾಡಿದರು.  




ಈ ಸಂದರ್ಭದಲ್ಲಿ ಕ ಸಾ ಪಾ -ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆ ಆಗಿರುವ   ಡಾ. ಮುರಲೀ ಮೋಹನ್ ಚೂoತಾರು ಅವರನ್ನು   ಹಾಗೂ ಕೃತಿಕಾರರಾದ ಜಯಪ್ರಕಾಶ್ ಪುತ್ತೂರು ಇವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸರಾದ  ಲಕ್ಷ್ಮೀಶ ತೋಳ್ಪಾಡಿ ಹಾಗೂ ಹಿರಿಯ ಸಾಹಿತಿಗಳಾದ ವಿ ಬಿ ಅರ್ತಿಕಜೆ  ಅವರು ಅಭಿನಂದಿಸಿದರು. 




ಈ ವೇಳೆ ಜಯಪ್ರಕಾಶ್ ಪುತ್ತೂರು ಅವರು ನೂರು ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿಗೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಡಾ. ಮುರಲೀ ಮೋಹನ್ ಚೂoತಾರು ಅವರಿಗೆ ಶ್ರೀ ದೇವರ ಪ್ರಸಾದ ನೀಡಿ  ಶಾಲು ಹೊದಿಸಿ  ಅಭಿನಂದಿಸಲಾಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top