ಬಸ್ಸಿನಲ್ಲಿ ಪ್ರಯಾಣಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚಾರ ಮಾಡಲು ಹಿತವೆನಿಸುವ ವಾಹನವೆಂದರೆ ಅದು ಬಸ್ಸ್. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಬೆಳ್ಳಂಬೆಳಗ್ಗೆ ಜನಜಂಗುಳಿಯಿಂದ ತುಂಬಿದ ಬಸ್ಸ್, ಇದರಿಂದ ಡೋರ್ ಹತ್ತಿರ ನಿಲ್ಲಬೇಕಾದ ಪರಿಸ್ಥಿತಿ, ಟಿಕೆಟ್ ಮಾಡಲು ಒದ್ದಾಡುವ ಕಂಡಕ್ಟರ್, ಸರಿಯಾದ ಸಮಯಕ್ಕೆ ಎತ್ತಬೇಕೆನ್ನುವ ಶಾಲಾಕಾಲೇಜು ಮಕ್ಕಳ ಚಡಪಡಿಕೆ, ನಾನಾ ಕಾರಣಕ್ಕೆ ಸಂಭವಿಸುವ ಜಗಳಗಳು, ಆಗಾಗ ಕಣ್ಣಿಗೆ ಕಾಣ ಸಿಗುವ ಚೆಕ್ಕಿಂಗ್ನವರು, ಸೀಟಿನಲ್ಲಿ ಕಾಣುವ ಕೆತ್ತನೆಗಳು, ಪ್ರೇಮಿಗಳು, ದಂಪತಿಗಳು ಬಸ್ಸಿನಲ್ಲಿ ಹೊಸದಾಗಿ ಚಿಗುರುವ ಪ್ರೀತಿ, ಅಪರಿಚಿತರ ಸ್ನೇಹ, ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳು, ಆಗಾಗ ಸಿಗುವ ತಿರುವುಗಳು, ಬ್ರೆಕ್ಗಳು ಇದರಿಂದ ಎದ್ದು ಬಿದ್ದು ನಗುವ ಸಂದರ್ಭಗಳು, ಹೀಗಿದ್ದರೂ ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡುವುದೆಂದರೆ ಅದೇನೋ ಒಂದು ಖುಷಿ.
ಬಸ್ಸ್ ಅಂದಕೂಡಲೇ ನೆನಪಾಗುವುದು ವಿಂಡೋಸೀಟ್. ಅದರಲ್ಲೂ ಹೆಣ್ಣುಮಕ್ಕಳು ಇಷ್ಟ ಪಡುವಂತಹ ಸೀಟ್ ಆಗಿರುತ್ತದೆ. ಹಾಡು ಹಾಕಿ ಸೀಟಿನಲ್ಲಿ ಕುಳಿತುಕೊಂಡರೆ, ಕಂಡಕ್ಟರ್ ಬಂದು ಟಿಕೆಟ್ ಕೊಡುವುದಕ್ಕಾಗಿ ಕಾದು ಬೈದುಕೊಂಡು ಅಲ್ಲಿಂದ ನಿರ್ಗಮಿಸುವ ಸನ್ನಿವೇಶಗಳೆಷ್ಟೋ, ವಿಂಡೋಸೀಟಲ್ಲಿ ಕುಳಿತು ನಿಸರ್ಗದ ಸೌಂದರ್ಯವನ್ನು ನೋಡುತ್ತಾ ನಿದ್ದೆಹೋದ ಸಂದರ್ಭಗಳಷ್ಟೋ. ರಾತ್ರಿ ಬಸ್ಸಿನಲ್ಲಿ ಸಂಚರಿಸುತ್ತಿದ್ದೇವೆ ಎಂದರೆ ಅದರ ಅನುಭವ ತುಂಬಾ ವಿಭಿನ್ನವಾಗಿರುತ್ತದೆ. ಬೆಳಗ್ಗೆ ಎಲ್ಲ ಸುತ್ತಾಡಿ ಸಂಜೆ ಹೊತ್ತಿಗೆ ನಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಯಾವುದೇ ವಾಹನಗಳು ಸಿಗದೇ ಕೊನೆಗೆ ನಮಗೆ ಆಪತ್ಭಾಂದವವಾಗಿ ಕಾಣುವಂತದ್ದು ಬಸ್ಸ್.
ಬಸ್ಸಿಗೆ ಹತ್ತಿ ಕುಳಿತುಕೊಂಡು ಸುಸ್ತಾದ ಕಾರಣ ನಿದ್ದೆಗೆ ಜಾರಿ ನಾವು ಇಳಿಯಬೇಕಾದ ಪ್ರದೇಶವನ್ನು ದಾಟಿ ಮುಂದೆ ಯಾವುದೋ ಸ್ಥಳದಲ್ಲಿ ಇಳಿದು ಮನೆಗೆ ಹೋಗಿ ಬಸ್ಸಿನಲ್ಲಿ ನಡೆದ ಘಟನೆಯನ್ನೆಲ್ಲ ಮನೆಮಂದಿಯೊಂದಿಗೆ ಹಂಚಿಕೊಂಡಾಗ, ನಮ್ಮ ಪರಿಸ್ಥಿತಿ ನೋಡಿ ಅಪಹಾಸ್ಯ ಮಾಡಿ, ಮರುದಿನ ಮತ್ತೆ ಬಸ್ಸಿನಲ್ಲಿ ಸಂಚರಿಸುತ್ತಿದ್ದೇವೆ ಎಂದರೆ ಹಿಂದಿನ ದಿನ ನಡೆದ ಸನ್ನಿವೇಶಗಳೆನ್ನೆಲ್ಲ ನೆನೆಸಿಕೊಂಡು ತುಟಿ ಅಂಚಿನಲ್ಲಿ ನಗೆ ಬೀರಿ ನಮ್ಮ ದಿನದ ಕೆಲಸ ಪ್ರಾರಂಭ ಮಾಡುತ್ತೇವೆ. ಬಸ್ಸಿನಲ್ಲಿ ಪ್ರಯಣಿಸುವಾಗ ದೊರಕುವಂತಹ ಅನುಭವಗಳು,ನೆನಪುಗಳು,ನಮ್ಮ ಜೀವನದ ಅದ್ಭುತ ಕ್ಷಣಗಳಾಗಿ ಉಳಿದಿರುತ್ತದೆ. ಸಿದ್ಧರಾಮಯ್ಯನ ಸರ್ಕಾರ ಬಂದ ಮೇಲೆ ಮಹಿಳೆಯರಿಗೆ ಉಚಿತ ಬಸ್ಸ್ ಪ್ರಯಾಣವನ್ನು ಜಾರಿಗೆ ತಂದರು. ಇದರಿಂದ ಸರ್ಕಾರ ಹಲವಾರು ರೀತಿಯ ನಷ್ಟವನ್ನು ಎದುರಿಸಬೇಕಾಯಿತು, ಅಷ್ಟೇ ಅಲ್ಲದೆ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಜೀವಗಳ ಜೀವನದ ಮೇಲೂ ಪೆಟ್ಟು ಬಿತ್ತು.
- ಲಾವಣ್ಯ, ನಾಗತೀರ್ಥ
ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)
ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ