ಕಾಂಗ್ರೆಸ್ಸಿನ ಒಡೆದಾಳುವ ನೀತಿಗೆ ದ.ಕ.ಬಿಜೆಪಿ ಖಂಡನೆ

Upayuktha
0


ಮಂಗಳೂರು: ಅಧಿಕಾರಗೋಸ್ಕರ ಯಾವ ಮಟ್ಟಕ್ಕೂ ಇಳಿಯುವ ಕಾಂಗ್ರೆಸ್ ಈ ದೇಶದಲ್ಲಿ ನಡೆಸಿರುವ ಮತೀಯ ಗಲಭೆ, ಅರಾಜಕತೆ, ಅಲ್ಪಸಂಖ್ಯಾತರ ಓಲೈಕೆಯ ತುಷ್ಟೀಕರಣದ ರಾಜಕಾರಣದ ಇತಿಹಾಸ ದೇಶದ ಜನತೆಗೆ ಗೊತ್ತಿದೆ. ಕರ್ನಾಟಕದಲ್ಲಿ ಗೋದ್ರ ಘಟನೆ ನಡೆಯುವ ಮಾಹಿತಿ ಇದೆಯೆಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್‍ರವರನ್ನು ತನಿಖೆಗೆ ಒಳಪಡಿಸಬೇಕು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಹರಿಪ್ರಸಾದ್ ಗೋದ್ರ ಘಟನೆ ಸೃಷ್ಟಿಸಿ ಸಂಚು ಮಾಡುತ್ತಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ.


ಯತೀಂದ್ರ ಸಿದ್ದರಾಮಯ್ಯ ನಮ್ಮ ದೇಶ ಹಿಂದೂ ರಾಷ್ಟ್ರವಾಗಬಾರದೆಂದು ನೀಡಿರುವ ಹೇಳಿಕೆ ಖಂಡನೀಯ. ಜಗತ್ತಿನಲ್ಲಿ ಬೇರೆ ದೇಶ ಸಂಸ್ಕೃತಿ ಉದಯಿಸುವ ಮೊದಲೇ ಭಾರತ ಹಿಂದೂ ರಾಷ್ಟವಾಗಿಯೇ ಇತ್ತು. ಪ್ರಾಚೀನ ಪರಂಪರೆ, ಸಂಸ್ಕೃತಿ, ಆಧ್ಯಾತ್ಮಿಕತೆ, ಚಿಂತನೆ ಇರುವ ಜಗತ್ತಿನ ಏಕೈಕ ದೇಶ ಭಾರತ. ಜಗತ್ತಿನ ಅನೇಕ ಸಾಧನೆಗಳಿಗೆ ಮೊದಲ ಕೊಡುಗೆಗಳನ್ನು ಕೊಟ್ಟದ್ದೇ ಭಾರತ. ಜಗತ್ತು ಕೂಡ ಭಾರತವನ್ನು ಹಿಂದೂ ರಾಷ್ಟ್ರವಾಗಿಯೇ ಗುರುತಿಸುತ್ತದೆ ಎಂಬ ಸಾಮಾನ್ಯ ಜ್ಞಾನ ಯತೀಂದ್ರರಿಗೆ ಇಲ್ಲ.


ಆಂಜನೇಯನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶ್ರೀರಾಮ ದೇವರಿಗೆ ಹೋಲಿಸಿದ್ದು ಹಾಸ್ಯಾಸ್ಪದ. ಹೆಸರಿನಲ್ಲಿ ರಾಮನಿದ್ದರೆ ಶ್ರೀರಾಮನಾಗಲು ಸಾಧ್ಯವೇ? ಮಂತ್ರಿ ಪದವಿಯಿಂದ ವಂಚಿತರಾದ ಕಾಂಗ್ರೇಸ್ ಮುಖಂಡರು, ಹೈಕಮಾಂಡ್ ಮೆಚ್ಚಿಸಲು ನೀಡುತ್ತಿರುವ ಕೀಳುಮಟ್ಟದ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ. ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top