ಹಾಸನ : ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ನಾವು ಸ್ಪರ್ಧಾ ಮನೋಭಾವವನ್ನು ಹೊಂದಿ ಸ್ಪರ್ಧಿಸಬೇಕು. ಸೋಲು ಗೆಲುವುಗಳು ಸಾಮಾನ್ಯವಾಗಿರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸದೆ ಇದ್ದರೆ ಸೋಲು ಗೆಲುವುಗಳನ್ನು ಗೊತ್ತಾಗುವುದೇ ಇಲ್ಲ. ಸೋಲಾಗಲಿ ಗೆಲುವಾಗಲಿ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಯಾದ ಜೆ.ಬಿ. ತಮ್ಮಣ್ಣ ಗೌಡ ಹೇಳಿದರು.
ನಗರದ ಹಾಸನಾಂಭ ಕಲಾಭವನದಲ್ಲಿ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಪ್ರಧಾನೋತ್ಸವ - ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ - ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿ ಹೊಂದಲು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಜಿಲ್ಲಾ ಉಪ ನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಯಾದ ಮೋಹನ್ ಕುಮಾರ್ ರವರು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ಪೋಷಕರು ಮಕ್ಕಳ ಸಂಸ್ಕಾರಯುತ ಮೌಲ್ಯಗಳ ಬೆಳವಣಿಗೆಗೆ ಒತ್ತು ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳು ಮೂಡಬೇಕು. ಮುಂಬರುವ ವಾರ್ಷಿಕ ಪರೀಕ್ಷೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಗೆ, ಪೋಷಕರಿಗೆ, ಒಳ್ಳೆಯ ಫಲಿತಾಂಶವನ್ನು ತಂದು ಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಮಂಜುನಾಥ್ ರವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯ ಶಿಕ್ಷಕರಾದ ಜಿ.ಆರ್. ಶೇಷಗಿರಿ, ಹೆಚ್.ಪಿ.ಮಂಜುಳ, ಎ.ವಿ.ಗೀತಾರಾಣಿ , ಎಂ.ಆರ್.ರಂಗಾಮಣಿ, ಕೆ. ಎನ್. ಚಿದಾನಂದ, ಎಸ್.ಕೆ.ಪೂರ್ಣಿಮಾ, ಪಿ. ಮಧು , ಸತ್ಯನಾರಾಯಣ ಮುರಳಿ, ಕೇಶವಮೂರ್ತಿ , ಚಿದಾನಂದ, ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ