ಮಂಗಳೂರು : ಮಾರ್ಚ್ 23 ಮತ್ತು 24ರಂದು ಕುದ್ಮುಲ್ ರಂಗರಾವ್ ಸಭಾಂಗಣ (ಪುರಭವನ) ಮಂಗಳೂರಿನಲ್ಲಿ ನಡೆಯುವ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಪುಸ್ತಕ ಬಿಡುಗಡೆ ಮಾಡಲಿಚ್ಛಿಸುವವರು ಜನವರಿ 31ರ ಒಳಗೆ ಕೃತಿಯ ವಿವರಗಳೊಂದಿಗೆ ದೂರವಾಣಿ ಮೂಲಕ ಹೆಸರನ್ನು ವಿನಯ ಆಚಾರ್ಯ ಎಚ್. ಗೌರವ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 9008851030 ಇವರಲ್ಲಿ ನೋಂದಣಿ ಮಾಡಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


