ಮಂಗಲ್ಪಾಡಿ: ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆಯ ಪ್ರಯುಕ್ತ ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಭಜನೆ ಸೇವೆಯೊಂದಿಗೆ ಶ್ರೀ ರಾಮ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಗ್ರಾಮ ಸಮಿತಿ ಆಶ್ರಯದಲ್ಲಿ ಶ್ರೀ ರಾಮೋತ್ಸವ ಮತ್ತು ಮಂಗಲ್ಪಾಡಿ ಅಸುಪಾಸಿನ ಕರಸೇವಕರಿಗೆ ಗೌರವರ್ಪಣೆ ಕಾರ್ಯಕ್ರಮವು ಇತ್ತೀಚೆಗೆ ಬಹು ವಿಜೃಂಭಣೆಯೊಂದಿಗೆ ಜರಗಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕ ಜಿತೇಂದ್ರ ಪ್ರತಾಪ ನಗರ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತಸರಾದ HK ಶೆಟ್ಟಿ , ಶ್ರೀ ರಾಮ ತೀರ್ಥ ಕ್ಷೇತ್ರ ಟ್ರಸ್ಟ್ ಚೆರುಗೋಳಿ ಗ್ರಾಮ ಸಮಿತಿ ಸಂಚಾಲಕಿ ರೇವತಿ ಕಮಲಾಕ್ಷ ಉಪಸ್ಥಿತರಿದ್ದರು. ಬಾಲಕೃಷ್ಣ ಅಂಬಾರ್ ಸ್ವಾಗತಿಸಿ, ಹೇಮರಾಜ್ ಪಂಜ ವಂದಿಸಿ ಶಿವಪ್ರಸಾದ್ ಶೆಟ್ಟಿ ತೋಟ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


