ತಿಮ್ಮಾಪೂರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಧ್ವಜರೋಹಣವನ್ನು ಶಾಲೆಯ ಸುಧಾರಣಾ ಸಮಿತಿ (ಎಸ್.ಡಿ.ಎಮ್.ಸಿ) ಅಧ್ಯಕ್ಷ ಹನಮಂತ ಚಲವಾದಿ ನೇರವರಿಸಿದರು. ನಂತರ ಮಾತನಾಡಿ ಡಾ||ಬಿ.ಆರ್.ಅಂಬೇಡ್ಕರರು ರಚಿಸಿದ ಸಂವಿಧಾನದ ಆಶಯಗಳು ತಿಳಿದುಕೊಂಡು ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳಾಗಿರಿ ಎಂದರಲ್ಲದೆ ಸ್ವಾತಂತ್ರಕ್ಕಾಗಿ ಶ್ರಮಿಸಿದ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಗುರುಮಾತೆ ಕೆ.ಎಚ್.ಬೆಲ್ಲದ ವಹಿಸಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಒತ್ತು ನೀಡಬೇಕೆಲ್ಲದೆ, ನಮ್ಮ ಶಾಲೆಯಲ್ಲಿ ಸಿಗುವ ಸೌಲಭ್ಯ ಜೊತೆಗೆ ಶಾಲೆಯ ಬಗ್ಗೆ ಅಭಿಮಾನವಿರಬೇಕು ಎಂದರಲ್ಲದೇ ಆಟದ ಜೊತೆಗೆ ಪಾಠವು ಮುಖ್ಯವಾಗಿದೆ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಕ ಮಂಜುನಾಥ ಟಕ್ಕಳಕಿ ಮಹಾತ್ಮ ಗಾಂಧೀಜಿ, ಡಾ||ಬಿ.ಆರ್. ಅಂಬೇಡ್ಕರ್ ಹಾಗೂ ಹುತಾತ್ಮ ಯೋಧ ರಾಮನಗೌಡ ಪಾಟೀಲ ಪುಷ್ಪ ನಮನ ಸಲ್ಲಿಸಲಾಯಿತು
ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಮಡಿವಾಳರ ಎಸ್.ಡಿ.ಎಮ್.ಸಿ ಸದಸ್ಯ ಜಗದೀಶ ಹದ್ಲಿ, ಯಮನಪ್ಪ ಪೂಜಾರಿ, ರಮೇಶ ಚಲವಾದಿ ನಾಗಪ್ಪ ವಾಲಿಕಾರ. ಎಸ್.ಡಿ.ಎಮ್.ಸಿ ಸದಸ್ಯರಾದ ಶ್ರೀಮತಿ ಚಾಂದಬಿ ನದಾಪ. ಶ್ರೀಮತಿ ನಿರ್ಮಲಾ ಮೂಲಿಮನಿ, ಶ್ರೀಮತಿ ದೀಪಾ.ಯ.ವಡ್ಡರ. ಶ್ರೀಮತಿ ಲಕ್ಷ್ಮವ್ವ ಮಾದರ. ಗ್ರಾ.ಪಂ ಸದಸ್ಯರಾದ ಶರಣಪ್ಪ ರಾಟಿ, ರೇಣುಕಾ ತಳವಾರ, ಯವನಪ್ಪ ಜಡ್ಡೆಪ್ಪ ಮಾದರ ಉಪಸ್ಥಿತರಿದ್ದರು.
ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಭಾಷಣ:
2ನೇ ತರಗತಿ ವಿದ್ಯಾರ್ಥಿಗಳಾದ ಸನ್ನಿಧಿ ಪಾತ್ರೋಟ ವಿಕಾಸ ಹೇರೂರ, ತನು ಮಾದರ, ಸಮಂತ ವಡ್ಡರ. 3ನೇ ತರಗತಿ ವಿದ್ಯಾರ್ಥಿಗಳಾದ ಅಮೃತ ಹಡಪದ, ತನುಜಾ ಪೂಜಾರಿ, ಪ್ರಿಯಾಂಕ ಚಲವಾದಿ, ಮಲ್ಲಿಕಾರ್ಜುನ ಜಗದೀಶ ಹದ್ಲಿ. 4ನೇ ತರಗತಿ ವಿದ್ಯಾರ್ಥಿಗಳಾದ ಅನುರಾಧಾ ವಡ್ಡರ, ಮಧು ಮಾದರ, ಶಾಹೀನ್ ಬೇಗಂ ನದಾಪ್, ವರ್ಷಾ ಹೇರೂರ 5ನೇ ತರಗತಿ ವಿದ್ಯಾರ್ಥಿಗಳಾದ ಗಣೇಶ ಮಾದರ, ಯಶೋದಾ ವಡ್ಡರ, ಅಮೃತಾ ದಾಸರ. 6ನೇ ತರಗತಿ ವಿದ್ಯಾರ್ಥಿಗಳಾದ ಶಿವಗಂಗಾ ಚಲವಾದಿ, ಕಲ್ಯಾಣಿ ವಡ್ಡರ, ಅಪೂರ್ವ ವಡ್ಡರ. 7ನೇ ತರಗತಿ ವಿದ್ಯಾರ್ಥಿಗಳಾದ ವಿಶ್ವ ಚಲವಾದಿ, ಅಂಜಲಿ ಮಾದರ, ಮಹೇಶ ಹಕ್ಕರಕಾಳ. 8ನೇ ತರಗತಿ ವಿದ್ಯಾರ್ಥಿಗಳಾದ ದುರಗಪ್ಪ ಮಾದರ, ಸಂಗೀತಾ.ಯ.ಮಾದರ, ರಾಜೇಶ್ವರಿ ಪೂಜಾರಿ, ಹನಮಂತ ಚಲವಾದಿ ಸ್ವಾತಿ ಹೇರೂರ ಮಾಡಿದರು.
ಇದೇ ಸಂದರ್ಭದಲ್ಲಿ ಗಂಗಪ್ಪ ಗೌಡ ಶ್ಯಾನಿ ರಾಯನಗೌಡರ ಅವರ ಸ್ಮರಣಾರ್ಥವಾಗಿ ಶಂಕರಗೌಡ ರಾಯನಗೌಡರವರು. ಶಾಲೆಗೆ ಅಲ್ಮಾರ್ ಕೊಡಮಾಡಿದಕ್ಕಾಗಿ ಅವರ ಸಹೋದರ ಸಂಗನಗೌಡ-ಸಿದ್ದನಗೌಡ ರಾಯನಗೌಡರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಅದಕ್ಕೂ ಪೂರ್ವದಲ್ಲಿ ಶಾಲೆಯಿಂದ ಪ್ರಭಾತ ಪೇರೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ವೀರಯೋಧ ದಿ. ರಾಯನಗೌಡ ನಾರಾಯಣಗೌಡರ ಸಮಾಧಿಯಲ್ಲಿ ಧ್ವಜರೋಹಣ ನೇರವರಿಸಲಾಯಿತು.
ಮಕ್ಕಳಿಂದ ನೃತ್ಯ, ನಾಟಕಗಳು, ದೇಶಭಕ್ತಿ ಗೀತೆಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಿಕ್ಷಕರಾದ. ಬಿ.ಎಸ್.ತೋಟಗೇರಿ, ಶ್ರೀಮತಿ ಕೆ.ಕೆ.ಮಿಂಚಿನಾಳ, ಶ್ರೀಮತಿ ಎಮ್.ಬಿ.ಮನಿಯಾರ, ಅಡುಗೆ ಸಿಬಂದಿಗಳಾದ ಶ್ರೀಮತಿ ಗೀತಾ ಬೇರಗಿ, ಶ್ರೀಮತಿ ನಿರ್ಮಲಾ ಹದ್ಲಿ, ಶ್ರೀಮತಿ ಸಂಗಮ್ಮ ಚಿತ್ತರಗಿ ಅಂಗನವಾಡಿ ಕಾರ್ಯಕರ್ತಯರಾದ ಯಲ್ಲಮ್ಮ ಮಾದರ, ಶ್ರೀಮತಿ ನಿರ್ಮಲಾ ಬೆಳ್ಳಿಹಾಳ ಹಾಜರಿದ್ದರು.
ಶಿಕ್ಷಕ ಮಂಜು ಟಕ್ಕಳಕಿ ಸ್ವಾಗತಿಸಿದರು. ಶಿಕ್ಷಕಿ ಗೀತಾ ತಾರಿವಾಳ ನಿರೂಪಿಸಿದರು. ಶಿಕ್ಷಕಿ ಶಾರದಾ ಹೊಲಗೇರಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


