ಅಯೋಧ್ಯೆ: ಉಡುಪಿಯ ಯುಗಪುರುಷರೆಂದೇ ಪ್ರಸಿದ್ಧರಾದ ಭಾವೀಸಮೀರ ಶ್ರೀವಾದಿರಾಜರು ಕಾರ್ತಿಕ ಮಾಸದಲ್ಲಿ ತುಲಸೀ ಆರಾಧನೆಯ ಹೊತ್ತಲ್ಲಿ ಅತ್ಯಂತ ಸುಲಭ ರೀತಿಯಲ್ಲಿ ಭಗವಂತನನ್ನು ಭಜಿಸಲು ರಚಿಸಿಕೊಟ್ಟ ತುಲಸೀ ಸಂಕೀರ್ತನೆ ಇಂದಿಗೂ ತುಳುನಾಡಿನಲ್ಲಿ ಚಾಲ್ತಿಯಲ್ಲಿದ್ದು ನೂರಾರು ಮನೆಗಳಲ್ಲಿ ದೇವಸ್ಥಾನಗಳಲ್ಲಿ ಸಾವಿರಾರು ಮಂದಿ ಭಕ್ತರು ಹಾಡಿ ಕುಣಿಯುವ ಪದ್ಧತಿ ಶತಮಾನಗಳಿಂದ ಮುಂದುವರೆದಿದೆ.
ಉಡುಪಿಯ ಕೃಷ್ಣಭಕ್ತರು ಅತ್ಯಂತ ಹೆಮ್ಮೆ ಪಡುವ ಸಂಗತಿ ಶುಕ್ರವಾರ ಅಯೋಧ್ಯೆಯಲ್ಲಿ ನಡೆದಿದೆ. ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಭವ್ಯ ರಾಮಮಂದಿರದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಪ್ರಯುಕ್ತ ಸಂಜೆ ಉತ್ಸವ ನಡೆಯುತ್ತಿದ್ದು ಶನಿವಾರ ಸಂಜೆ ರಾಮಮಂದಿರದ ಅಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ವಸಂತ ಮಂಟಪದಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನಿಟ್ಟು ವಸಂತೋತ್ಸವ ನಡೆಸಿದ ವೇಳೆಯಲ್ಲಿ ಶ್ರೀಗಳ ವಿದ್ಯಾರ್ಥಿಗಳು ತಾಳ ಹಿಡಿದು ಶ್ರೀವಾದಿರಾಜರ ತುಲಸಿ ಸಂಕೀರ್ತನೆಯನ್ನು ಹಾಡಿ ನಲಿದು ತುಲಸಿ ಸಂಕೀರ್ತನೆಯನ್ನು ರಾಮನಂಗಳಕ್ಕೆ ಕೊಂಡೊಯ್ದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


