ಬದಲಾಗಿದ್ದು ಗೋಡೆ ಮೇಲೆ ಇರುವ ಕ್ಯಾಲೆಂಡರ್ ಹೊರತು ನಮ್ಮ ಜೀವನವಲ್ಲ.ಒಂದು ಬಾರಿ ಒಂಟಿಯಾಗಿ ಕೂತ್ಕೊಂಡು ಈ ವರ್ಷ ನಾನೇನು ಮಾಡಿದೆ ಎಂದು ಯೋಚಿಸಿದಾಗ ಸಿಕ್ಕಿದ್ದು ಬರಿ ಬೆರಳಣಿಕೆಯಷ್ಟು ವಿಷಯಗಳು ಮಾತ್ರ. ವರ್ಷದ 365 ದಿನದಲ್ಲಿ ನಾನು ಮಾಡಿದ ಕೆಲಸ ಬರಿ ಅಷ್ಟೇ.
ಯಾರದ್ದೋ ಜೀವನದ ಬಗ್ಗೆ ಮಾತನಾಡುವಲ್ಲಿ ವ್ಯರ್ಥ ಮಾಡಿದ ಸಮಯವನ್ನು ನಮ್ಮ ಜೀವನದ ಬಗ್ಗೆ ಯೋಚನೆ ಮಾಡುವಲ್ಲಿ ಸೋತು ಬಿಟ್ಟೆವಾ..? ಇನ್ಯಾರದ್ದೋ ತಪ್ಪನ್ನು ಗುರುತಿಸಿದ ನಾವು ನಮ್ಮ ತಪ್ಪನ್ನು ಕಂಡುಕೊಳ್ಳುವುದರಲ್ಲಿ ಎಲ್ಲಿ ಎಡವಿದೆವು..? ಯಾರದ್ದೋ ಖುಷಿನ ನೋಡಿ ಸಂತೋಷಪಟ್ಟೆವು ಕೆಲವೊಂದು ಬಾರಿ ಅಸೂಯೆ ಪಟ್ಟದ್ದು ಇದೆ. ಮತ್ತೊಬ್ಬರ ನೋವಿಗೆ ಸಾಂತ್ವನ ಹೇಳಿದ್ದು ಇದೆ ಜೊತೆಗೆ ಹಾಗೆ ಆಗಲಿ ಅಂತ ನಕ್ಕಿದ್ದು ಇದೆ.
ಯಾರೋ ಮಾಡಿದ ಸಾಧನೆ ನೋಡಿ ಖುಷಿ ಪಟ್ಟು ವಾಟ್ಸಾಪ್ ಸ್ಟೇಟಸ್ ಹಾಕೋ ನಾವು ಎಷ್ಟು ಜನ ಹಾಕಿರೋ ಸ್ಟೇಟಸ್ ನೋಡಿದ್ರೂ ಎಷ್ಟು ಜನ ಅದನ್ನೇ ರಿಪೋಸ್ಟ್ ಮಾಡಿದ್ರೂ ಅಂತ ನೋಡುವುದರಲ್ಲಿ ಬ್ಯುಸಿ ಆದೇವೇ ಹೊರತು ನಾನು ಸಾಧನೆ ಮಾಡ್ಬೇಕು ಅಂತ ಯಾರು ಯೋಚನೆನೂ ಮಾಡ್ಲಿಲ್ಲ.
ಬರಿ ಸ್ಟೇಟಸ್ ನೋಡುವುದರಲ್ಲಿ ನಮ್ಮ ವರ್ಷ ಮುಗಿದೇ ಹೋಯಿತ...? ಇವತ್ತು ನಾನು ಹಾಕಿದ ಸ್ಟೇಟಸ್ ನೋಡೋ ಜನ ನಾಳೆ ನಾನು ಏನೋ ಒಂದು ಸಾಧನೆ ಮಾಡಿದ್ದನ್ನು ಹಾಕುವರು ಎಂದು ಯಾಕೆ ಯೋಚನೆ ಮಾಡ್ಲಿಲ್ಲ...
ವರ್ಷ ಹುರುಳಿ ಹೋಯಿತು ಜೊತೆಗೆ ನಮ್ಮ ಆಯಸ್ಸು ಕಮ್ಮಿ ಆಯಿತು. ಪ್ರತಿ ವರ್ಷದ ಕೊನೆಯಲ್ಲಿ ಸಿಗುವುದು ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಕೊನೆಗೆ ಯೋಚನೆ ಮಾಡುವುದು ಒಂದೇ ಬರು ವರ್ಷ ನಾನು ಆ ಕೆಲಸ ಮಾಡ್ಬೇಕು, ಈ ಸಾಧನೆ ಮಾಡ್ಬೇಕು ಅಂತ ಆಮೇಲೆ ಮತ್ತದೇ ಕಳೆದು ಹೋದ ದಿನಗಳು ಆದೇ ಹಳೇ ವಿಷಯಗಳು...ಬೇರೆಯವರ ಜೀವನ ನೋಡುವುದರಲ್ಲಿಯೇ ವರ್ಷ ಕಳೆದು ಹೋಗಿಯಾಗಿರುತ್ತದೆ.
ನಾನು ಏನೋ ನಾಳೆಗಾಗಿ ಮಾಡುತ್ತೇನೆ, ನನ್ನ ಜೀವನವನ್ನ ರೂಪಿಸುತ್ತೇನೆ ಎಂದು ಯೋಚನೆ ಮಾಡಿ ಹೊರಟಾಗ ಯಾರದ್ದೋ ಆಟೋ ಹಿಂದೆ ಬರೆದೆ ಸಾಲು ಕಣ್ಣಿಗೆ ಬೀಳುತ್ತೇ "Enjoy every time because death is unexpected".ಮತ್ತೇ ನನ್ನದಲ್ಲದ ನಾಳೆಗೆ ನಾನು ಯಾಕೆ ಯೋಚನೆ ಮಾಡ್ಬೇಕು ಅನ್ನೋ ಮತ್ತದೇ ಪ್ರಶ್ನಾರ್ಥಕ ಚಿಹ್ನೆ. ವರ್ಷ ವರ್ಷ ಕ್ಯಾಲೆಂಡರ್ ಬದಲಾಗುವುದೇ ಹೊರತು ನಾವು ಬದಲಾಗುವುದೇ ಇಲ್ಲ.
ಬದಲಾಗು ಬೇರೆಯವರಿಗಾಗಿ ಅಲ್ಲ ನಿನಗಾಗಿ.ಸಾಧಿಸು ನೀ ಆಳಿದರು ನಿನ್ನ ಹೆಸರು ಅಚ್ಚಳಿಯದ ಹಾಗೆ.
-ಧನ್ಯಶ್ರೀ
ತೃತೀಯ ಬಿ.ಎಸ್ಸಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ