ಪುತ್ತೂರು: ಪ್ರೌಢಶಾಲಾ ವಿದ್ಯಾರ್ಥಿ ಜೀವನದಲ್ಲಿ ಸುಲೋಚನಾರವರು ಮೌನವಾಗಿದ್ದರು. ಅವರ ಮೌನದಲ್ಲಿ ಸಾಕಷ್ಟು ವಿಚಾರಗಳಿತ್ತು. ಅವರ ಮೌನ ಈಗ ಸ್ಪೋಟವಾಗಿದೆ. ಅಮ್ಮನ ಆದರ್ಶದಲ್ಲಿ ಪುಸ್ತಕವನ್ನು ಬಹಳ ದೀರ್ಘವಾಗಿ ಬರೆದಿದ್ದಾರೆ. ಕಲಾ ಪ್ರಜ್ಞೆ ಇಲ್ಲದವರೂ ಜಿಲ್ಲಾಧಿಕಾರಿಗಳಾಗಿದ್ದಾರೆ. ಕೆಲವರು ಕೇವಲ ಸಹಿ ಹಾಕುವುದಕ್ಕೆ ಅಧಿಕಾರಿಗಳಾಗಿದ್ದಾರೆ. ಇದರ ಬಗ್ಗೆ ಸ್ವತಃ ನಾನೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು ಸುಲೋಚನಾರವರು ಸಹಿ ಹಾಕುವುದಕ್ಕೆ ಹುಟ್ಟಿದವರಲ್ಲ ಎಂದು ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣ ಚಿಂತಕ ಗೋಪಾಡ್ಕರ್ ಹೇಳಿದರು.
ಅವರು ಮಕ್ಕಳ ಮಂಟಪ ದರ್ಭೆ ಪುತ್ತೂರಿನಲ್ಲಿ ನಡೆದ ಸಲೋಚನಾ ಪಿ.ಕೆ ಯವರ 'ಸತ್ಯದರ್ಶನ ನುಡಿಮುತ್ತುಗಳು' ಮತ್ತು 'ಅಮ್ಮನಮಾತ್ ಭಸ್ಮಕಟ್ಟಿದ ತಗಡಿನ ತಾಯಿತಾತ್' ಅರೆಭಾಸೆ ಕವನ ಸಂಕಲನ ಲೋಕಾರ್ಪಣ ಸಮಾರಂಭದಲ್ಲಿ ಮಾತನಾಡಿದರು.
ಲೇಖಕಿಯಾಗಿರುವ ಉಪ ತಹಶೀಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಸ್ವ ಚಿಂತನೆಯೊಂದಿಗೆ ಬೆಳೆದವಳು. ಪ್ರೌಢ ಶಾಲೆಯಲ್ಲಿ ಕವನ ಬರೆದಿದ್ದೇನೆ. ಕಾಲೇಜು ಹಂತದಲ್ಲಿ ಸಾಹಿತ್ಯದ ರುಚಿ ತಿಳಿದವಳು. ಹೇಳಿಕೊಳ್ಳಲಾಗದ ವಿಚಾರಗಳನ್ನು, ನನ್ನೊಳಗಿನ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲು ಶ್ರಮಪಟ್ಟಿದ್ದೇನೆ. ಧೈರ್ಯವಿಲ್ಲದೆ ಕಾಲಾವಕಾಶ ಪಡೆದುಕೊಂಡಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಬಾಲ್ಯದಲ್ಲಿ ದೊರೆತ ಅಮ್ಮನ ಹಿತ ನುಡಿಗಳನ್ನು ಕೃತಿಗಳ ಮೂಲಕ ಸುಲೋಚನಾರವರು ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸ ಮುಖದ ಪರಿಚಯವಾಗಿದೆ. ಫೇಸ್‌ಬುಕ್‌ನಲ್ಲಿ ಬರೆಯುವವರೂ ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರಾಗಿದ್ದು ಮುಂದೆ ಅವರು ಉತ್ತಮ ಸಾಹಿತಿಗಳಾಗಿ ಬರಬಹುದು ಎಂದ ಅವರು ನಾನು ಬರೆದದ್ದೇ ಉತ್ಕೃಷ್ಟವಾದುದು ಎಂಬ ಭ್ರಮೆ ಸಾಹಿತಿಗಳಲ್ಲಿರಬಾರದು ಎಂದರು.
ರಂಗ ಬೆಳಕು ತಂಡದವರಿಂದ ರಂಗ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಂಗ ಬೆಳಕು ತಂಡದವರಿಂದ ರಂಗ ಗೀತೆಗಳ ಗಾಯನ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಎಚ್. ಭೀಮರಾವ್ ವಾಷ್ಟರ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಸುಪ್ರಿತಾ ಚರಣ್ ಪಾಲಪ್ಪೆ, ಕವಿತಾ ಸತೀಶ್, ದಿವ್ಯ ಮಯ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪ್ರಿಯಾ ಸುಳ್ಯ, ರಮ್ಯ ಚೇತನ್ ವಿಟ್ಲ, ಚೇತನ್ ಕೆ.ವಿಟ್ಲ, ಹರ್ಷಿತ ಹರೀಶ್ ಕುಲಾಲ್ ಐವನಾಡು, ಸೌಜನ್ಯ ಬಿ.ಎಂ ಕೆಯ್ಯೂರು, ನಾರಾಯಣ ನಾಯ್ಕ ಕುದುಕೋಳಿ, ನವ್ಯಶ್ರೀ ಸ್ವರ್ಗ, ಪೂರ್ಣಿಮಾ ಗಿರೀಶ್ ಕತ್ತಿಮುಂಡ, ಜೆಸ್ಸಿ ಪಿ.ವಿ, ಶಾಹಿನಾ ಎನ್ ಬೆಳ್ಳಾರೆ, ಉಮಪ್ರಸಾದ್ ರೈ ನಡುಬೈಲು, ಸಂಗೀತ ಕೂಡ್ಲು, ಪೂರ್ಣಿಮಾ ಕುದ್ಮಾರ್, ನಳಿನಿ ಡಿ. ಪಂಜಳ, ಪ್ರಮೀಳಾ ರಾಜ್, ಪೂರ್ಣೀಮಾ ಪೆರ್ಲಂಪಾಡಿ, ವಿಜಯ ಕುಮಾರ್ ಕಾಣಿಚ್ಚಾರ್ ಹಾಗೂ ಅನನ್ಯ ಎಚ್ ಸುಬ್ರಹ್ಮಣ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ