ತುಳು ಭಾಷೆ, ಸಾಹಿತ್ಯ, ಜೀವನಕ್ರಮ ಇವೆಲ್ಲವೂ ಶ್ರೇಷ್ಠ: ದಯಾಕರ ಕುಳಾಯಿ

Upayuktha
0


ಮಂಗಳೂರು: ನಮ್ಮ ತುಳು ವೈವಿಧ್ಯತೆಯಲ್ಲೂ ಭಾಷಾ ಸೊಬಗನ್ನು ಪಡೆದಿದೆ. ನಾವು ಪಟ್ಟು ಹಿಡಿದು ಅದನ್ನು ಆಗ್ರಹಪೂರ್ವಕವಾಗಿ ಉಳಿಸಿ-ಬೆಳೆಸುವಲ್ಲಿ ಹಿಂದುಳಿಯಬಾರದು ತುಳುವಿನ ಉಳಿವು- ಅಳಿವಿನ ಪ್ರಶ್ನೆಗೆ ನಾವೇ ಬಾಧ್ಯಸ್ಥರು ಎಂದು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ (ರಿ.) ನ ಅಧ್ಯಕ್ಷ ದಯಾಕರ ಕುಳಾಯಿ ಯವರು ಹೇಳಿದರು.


ಅವರು ಕುಡ್ಲದ ತುಳುಕೂಟ ಸಂಸ್ಥೆಯ ಬಂಗಾರ್ ಪರ್ಬ ಸರಣಿ ವೈಭವದ ಸಮಾರೋಪ ಸಮಾರಂಭದ 10ನೇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಧಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಬಂದ ಮಾಜಿ ಸೈನಿಕರ ಅಸೋಸಿಯೇಶನ್ ನ ಅಧ್ಯಕ್ಷರಾದ ಬಾಳ ಶ್ರೀಕಾಂತ ಶೆಟ್ಟಿಯವರು, ಈಗೀಗ ತುಳುವಿನ ಅನೇಕ ಶಬ್ದಗಳು ಕನ್ನಡೀಕರಣವಾಗಿ ತುಳುವಿನ ಮೂಲ ಅಸ್ತಿತ್ವ ಅಳಿಸಿ ಹೋಗಿ ನಮ್ಮ ಮುಂದಿನ ಪೀಳಿಗೆ ಭಾಷಾ ಗೊಂದಲದಲ್ಲಿ ಬಳಲುವಂತಾಗುತ್ತದೆ. ಅದಕ್ಕಾಗಿ ತುಳುಕೂಟ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ  ದಾರಿದೀಪಗಳಾಗುತ್ತವೆ. ಐವತ್ತು ವರ್ಷಗಳ ಅವರ ಹೋರಾಟಕ್ಕೆ ತಕ್ಕ ಫಲ ಸಿಗಲಿ. ನಾವೆಲ್ಲಾ ನೈಜ ತುಳುವರಾಗೋಣ ಎಂದರು.


ತುಳುಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗರು ಮಾತನಾಡಿ, ತುಳು ಭಾಷೆ ನಮ್ಮ ಹಕ್ಕಿನದ್ದು. ಅದನ್ನು ಬಳಸಿ ಬೆಳೆಸುವುದು ಮುಂದಿನ ಜನಾಂಗದವರಾದ ನಿಮ್ಮ ಹೊಣೆ. ಹೆಚ್ಚು ಹೆಚ್ಚು ಅನ್ಯಭಾಷೀಯ ಶಬ್ದಗಳು ಇದರೊಂದಿಗೆ ಬೆರೆತರೆ ಮೂಲ ಭಾಷೆ ಮೂಲೆ ಸೇರುತ್ತದೆ. ಈ ಅಪಾಯವನ್ನು ಗಮನಿಸಿ, ತುಳುಕೂಟ ನಡೆಸುವ ಈ ಭಾಷಾ ಉಳಿವಿನ ಕಾರ್ಯಕ್ಕೆ ಬೆಂಬಲ ನೀಡಿ. ಹತ್ತು ಹಲವು ಕೈಗಳ ಒಗ್ಗೂಡುವಿಕೆಯಿಂದ ತುಳು ಎರಡನೇ ಪರಿಚ್ಛೇದಕ್ಕೆ ಸೇರುವಲ್ಲಿ ಶಂಕೆಯೇ ಇರದು ಎಂದು ಕರೆ ನೀಡಿದರು.



ಬ್ರಹ್ಮಶ್ರೀ ನಾರಾಯಣ ಗುರು ಕಾಲೇಜಿನ ಪ್ರಾಂಶುಪಾಲರಾದ ಉಮೇಶ ಕರ್ಕೇರರು ಪಾರಂಪರಿಕ ತುಳು ಜೀವನದ ಅನೇಕ ವಸ್ತುಗಳ ತೂಪರಿಕೆ (ಪ್ರದರ್ಶಿನಿ) ಯನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಕು. ಪುಷ್ಪಲತಾ, ಗುಣವತಿ ಹಾಗೂ ಇನ್ನೋರ್ವ ಮುಖ್ಯೋಪಾಧ್ಯಾಯ ಮಹಾವೀರ ಜೈನ್ ಅತಿಥಿಗಳಾಗಿದ್ದರು.



ತುಳುಕೂಟದ ಖಚಾಂಚಿ ಚಂದ್ರಶೇಖರ ಸುವರ್ಣರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ರೊ. ಜೆ.ವಿ.ಶೆಟ್ಟಿ ಧನ್ಯವಾದವಿತ್ತರು. ಸತೀಶ್, ಸುರತ್ಕಲ್ ಹಾಗೂ ವಿಜಯಲಕ್ಷೀ ಎಲ್. ಎನ್. ತೀರ್ಪುಗಾರರಾಗಿ ಸಹಕರಿಸಿದರು. ಹೇಮಾ ನಿಸರ್ಗ ಹಾಗೂ ಪ್ರ. ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಾದ ಸತ್ಯವತಿ ಆರ್. ಬೋಳೂರು, ರಮೇಶ್ ಕುಲಾಲ್ ಬಾಯಾರು ವಿಶ್ವನಾಥ ಪೂಜಾರಿ ಸೋಣಳಿಕೆ ಸ್ಪರ್ಧೆಗಳನ್ನು ನಡೆಸಲು ಪೂರಕರಾದರು.


ವಿದ್ಯಾರ್ಥಿನಿಯರಾದ ಶ್ರೇಯಾ, ಪಲ್ಲವಿ ಪ್ರಾರ್ಥನೆ ಹಾಡಿದರು. ಶಾಲಾ ಅಧ್ಯಾಪಕರು 'ಅಧ್ಯಾಪಿಕೆಯರು, ಉಪನ್ಯಾಸಕ- ಉಪನ್ಯಾಸಕಿ ಬಳಗ ಸ್ಪರ್ಧೆಗಾಗಿ ಕೈಜೋಡಿಸಿದ್ದರು. ಬಳಿಕ ಸಮಾರೋಪ ಸಮಾರಂಭದಲ್ಲಿ ತುಳುವರ ಪಾರಂಪರಿಕ ವಾದ್ಯವಾದನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತುಳುಕೂಟದ ವತಿಯಿಂದ ಬಹುಮಾನ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top