ಬೆಂಗಳೂರು: ಫ್ಲ್ಯೂಟ್ ನ್ ಫೀಟ್ ಅಕಾಡೆಮಿಯ 8 ನೇ ವಾರ್ಷಿಕೋತ್ಸವದ ಸಂಭ್ರಮ

Upayuktha
0




ಬೆಂಗಳೂರು : ನಗರದ ಪ್ರತಿಷ್ಠಿತ ಸಂಗೀತ ಹಾಗೂ ನೃತ್ಯ ಸಂಸ್ಥೆಗಳ ಸಾಲಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಸ್ಥೆ ಫ್ಲ್ಯೂಟ್ ನ್ ಫೀಟ್ ಅಕಾಡೆಮಿ. ಡಿಸೆಂಬರ್ 30ನೇ ಶನಿವಾರದಂದು ಜಯನಗರದಲ್ಲಿರುವ ಶ್ರೀ ಜಯರಾಮ ಸೇವಾ ಮಂಡಳಿಯ ಸಭಾಂಗಣದಲ್ಲಿ ಸಂಸ್ಥೆಯ 8ನೇ ವಾರ್ಷಿಕೋತ್ಸವವು ಸುಂದರವಾಗಿ ಮೂಡಿಬಂತು. 




ಈ ಸಂಸ್ಥೆಯು ಹಲವಾರು ವರ್ಷಗಳಿಂದ "ಕೊಳಲು ಹಾಗೂ ಭರತನಾಟ್ಯ" ತರಬೇತಿ ನೀಡುತ್ತಾ ಬರುತ್ತಿದ್ದು ಇದರ    ವಾರ್ಷಿಕೋತ್ಸವದ ಅಂಗವಾಗಿ  ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿದರು. ಮೊದಲಿಗೆ ಹಿರಿಯ ಕಲಾವಿದರಾದ ಕಲಾಯೋಗಿ ಡಾ|| ಮಾಲಾ ಶಶಿಕಾಂತ್ ಹಾಗೂ ಡಾ|| ಎಸ್ ನಟರಾಜಮೂರ್ತಿರ ವರು ದೀಪ ಬೆಳಗಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು. ನಂತರ ವಿದ್ವಾನ್ ವಿವೇಕ್ ಕೃಷ್ಣ ರವರ ಶಿಷ್ಯರು ಸುಮಧುರವಾದ "ಕೊಳಲು ವಾದನ"ವನ್ನು ಪ್ರದರ್ಶಿಸಿದರು. 





ಪ್ರಸಿದ್ಧ ಕೃತಿಗಳಾದ "ಮಹಾಗಣಪತಿಂ", "ಯಾರೇ ರಂಗನ" ಹಾಗೂ  ನೋಟ್ಟುಸ್ವರ ನುಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಮುಂದುವರೆದ ಭಾಗವಾಗಿ ವಿದುಷಿ ಅರಣ್ಯ ನರೈನ್ ರವರ ಶಿಷ್ಯ ವೃಂದದವರು "ಭರತನಾಟ್ಯ"  ಪ್ರದರ್ಶನವನ್ನು ನೀಡಿದರು. ಗಣೇಶನ ಸ್ತುತಿಯೊಂದಿಗೆ ಪ್ರಾರಂಭಿಸಿ, ಅಲ್ಲಾರಿಪು, ಶಬ್ದಂ, ಕೃಷ್ಣನ ಕಣ್ಮನ ಸೆಳೆಯುವ ಕೃತಿಗಳು, ಪುರಂದರದಾಸರ ಒಂದು ವಿಭಿನ್ನವಾದ ಕೃತಿ ಪುರಂದರಹಾಸ ಹಾಗೂ  ತಿಲ್ಲಾನದೊಂದಿಗೆ ವಾರ್ಷಿಕೋತ್ಸವವೂ ವಿಜೃಂಭಣೆಯಿಂದ ಸಂಪನ್ನವಾಯಿತು. 





ಈ ಸಂಸ್ಥೆಯ ರೂವಾರಿಯರಾದ ಅಂತರಾಷ್ಟ್ರೀಯ ಖ್ಯಾತಿಯ ವಿವೇಕ್ ಕೃಷ್ಣ ಹಾಗೂ ಅರಣ್ಯ ನರೈನ್ ರವರನ್ನು ಸಂದರ್ಶಿಸಿದಾಗ ಹೀಗೆನ್ನುತ್ತಾರೆ,  "ನಮ್ಮಲ್ಲಿ ನಾವು ಶಾಸ್ತ್ರೀಯ ಚೌಕಟ್ಟು ಹಾಗೂ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಈಗಿನ ಪೀಳಿಗೆಗೆ ಇದು ಅತಿ ಮುಖ್ಯವೆನ್ನುತ್ತಾರೆ, ಮುಂದೆ ಮಾರ್ಚ್ 16 ಮತ್ತು 17 -2024 ರಂದು  ದಿ  ಇನ್ಸ್ ಟಿಟ್ಯುಟ್ ವರ್ಲ್ಡ್ ಕಲ್ಚರ್ ಬಿ ಪಿ ವಾಡಿಯ ರಸ್ತೆ, ಬಸವನಗುಡಿಯಲ್ಲಿ ನಡೆಯಲಿರುವ ಇವರ  "ನಾದಾಭಿನಯಂ" ಅಂತರಾಷ್ಟ್ರೀಯ ಸಂಗೀತ  ನೃತ್ಯೋತ್ಸವಕ್ಕೆ ಎಲ್ಲರಿಗೂ ಸ್ವಾಗತವನ್ನು ಕೋರಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top