ಮಂಗಳೂರು: ಸ್ಕ್ಯಾನಿಯಾದ ಗಣಿಗಾರಿಕೆ ಟಿಪ್ಪರ್ ಮಾರಾಟ ಮತ್ತು ಸೇವಾ ಕಾರ್ಯಾಚರಣೆಗಳಿಗಾಗಿ ಪಿಪಿಎಸ್ ಮೋಟರ್ಸ್ ಜತೆಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದ್ದು, ಇದು ದೇಶದ ಗಣಿಗಾರಿಕೆ ವಲಯದಲ್ಲಿ ಸ್ಕ್ಯಾನಿಯಾ ಇಂಡಿಯಾ ಅಸ್ತಿತ್ವವನ್ನು ಬಲಪಡಿಸಲು ನೆರವಾಗಲಿದೆ ಎಂದು ಕಂಪನಿ ಪ್ರಕಟಿಸಿದೆ.
ಸ್ಕ್ಯಾನಿಯಾ ಇಂಡಿಯಾ ತಂತ್ರಜ್ಞಾನ ಚಾಲಿತ ಮತ್ತು ನಾವೀನ್ಯತೆಯಿಂದ ಮುನ್ನಡೆಸುವ ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಚಾಲನೆ ನೀಡುವಲ್ಲಿ ನಂಬಿಕೆ ಇಟ್ಟಿದ್ದು, ಹೆಚ್ಚಿನ ಲಭ್ಯತೆ, ಉತ್ಪಾದಕತೆ ಹೆಚ್ಚಳ ಮತ್ತು ಉತ್ತಮ ಗ್ರಾಹಕ ಲಾಭದಾಯಕತೆಗೆ ಕಾರಣವಾಗುವ ಗಣಿಯ ನಿರ್ಣಾಯಕ ಅಂಶಗಳನ್ನು ಪತ್ತೆ ಮಾಡುವ, ವಿಶ್ಲೇಷಿಸುವ ಮತ್ತು ನಿರಂತರವಾಗಿ ಮುನ್ನಡೆಸುವ ಮೂಲಕ ಕಂಪನಿಯು ಸೂಕ್ತವಾದ ಪರಿಹಾರಗಳನ್ನು ಒದಗಿಸಲಿದೆ ಎಂದು ಸ್ಕ್ಯಾನಿಯಾ ಕಮರ್ಷಿಯಲ್ ವೆಹಿಕಲ್ಸ್ ಇಂಡಿಯಾ ಪ್ರೈವೇಟ್‍ನ ವ್ಯವಸ್ಥಾಪಕ ನಿರ್ದೇಶಕ ಜೋಹಾನ್ ಪಿ ಶ್ಲಿಟರ್ ಹೇಳಿದ್ದಾರೆ.
ಪಿಪಿಎಸ್ ಭಾರತದಾದ್ಯಂತ ಆರು ಪ್ರಾದೇಶಿಕ ಗೋದಾಮುಗಳನ್ನು ಹೊಂದಿದ್ದು, ಇದು ಗಣಿಗಾರಿಕೆಯ ಸ್ಥಳಗಳಿಗೆ ಹತ್ತಿರದಲ್ಲಿದೆ ಮತ್ತು ನಾಗ್ಪುರದಲ್ಲಿರುವ ಸ್ಕ್ಯಾನಿಯಾದ ಕೇಂದ್ರ ಗೋದಾಮಿಗೆ ಆಯಕಟ್ಟಿನ ಸಂಪರ್ಕವನ್ನು ಹೊಂದಿದೆ, ಇದು ದೃಢವಾದ ಹಬ್ ಮತ್ತು ಸ್ಪೋಕ್ ಮಾದರಿಯನ್ನು ಸೃಷ್ಟಿಸುತ್ತದೆ. ನುರಿತ ತಂತ್ರಜ್ಞ ಸಿಬ್ಬಂದಿ ಮತ್ತು ಒಂಬತ್ತು ಮೊಬೈಲ್ ಸೇವಾ ವ್ಯಾನ್‍ಗಳು ಪ್ರಮುಖ ರಿಪೇರಿ, ಒಟ್ಟಾರೆ ದುರಸ್ತಿ, ಅಪಘಾತ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಯನ್ನು ಸಮರ್ಥವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ