ರಾಯಚೂರು: ಭಾರತದ ಅತಿದೊಡ್ಡ ಸ್ಕೂಲ್ ಎಜ್ಯುಟೆಕ್ ಕಂಪನಿಯಾದ ಲೀಡ್, ತನ್ನ 9,000ಕ್ಕೂ ಹೆಚ್ಚು ಶಾಲೆಗಳ ಜಾಲಕ್ಕೆಎಐ (ಕೃತಕ ಬುದ್ಧಿಮತ್ತೆ)- ಚಾಲಿತ ಮೌಲ್ಯಮಾಪನ ವ್ಯವಸ್ಥೆ ಪ್ರಾರಂಭಿಸುವುದಾಗಿ ಘೋಷಿಸಿದೆ.
ಭಾರತದಾದ್ಯಂತ ಇರುವ ಶಾಲೆಗಳಲ್ಲಿ 11 ವರ್ಷಗಳ ಕಾಲ ಕೆಲಸ ಮಾಡಿದ್ದರಿಂದ ಪಡೆದ ಶೈಕ್ಷಣಿಕ ಒಳನೋಟಗಳನ್ನು ಆಧರಿಸಿ ಲೀಡ್‍ನ ಎಐ-ಚಾಲಿತ ಮೌಲ್ಯಮಾಪನ ಕಾರ್ಯಕ್ರಮ ರೂಪಿಸಲಾಗಿದೆ ಮತ್ತು ಇದು ಪ್ರತಿ ಶಿಕ್ಷಕರಿಗೆ ಅವರ ನಿರ್ದಿಷ್ಟ ತರಗತಿಯ ಅಗತ್ಯಗಳಿಗೆ ಸರಿಹೊಂದುವ ಮೌಲ್ಯಮಾಪನಗಳನ್ನು ವಿಶೇಷ ಅಗತ್ಯತೆಗೆ ಅನುಗುಣವಾಗಿ ರೂಪಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಲೀಡ್‍ನ ಸಿಇಓ ಮತ್ತು ಸಹ-ಸಂಸ್ಥಾಪಕ ಸುಮೀತ್ ಮೆಹ್ತಾ ಹೇಳಿದ್ದಾರೆ.
ಆಫ್‍ಲೈನ್-ಮೂಲಕವೂ ಕಾರ್ಯನಿರ್ವಹಿಸುವ ಮತ್ತು ಸ್ವಯಂ-ಸಿಂಕ್ರೊನೈಸ್ ಮಾಡಲಾದ, ಲೀಡ್‍ನ ಎಐ-ಚಾಲಿತ ಮೌಲ್ಯಮಾಪನಗಳು ಶಿಕ್ಷಕರಿಗೆ ಅಗತ್ಯವಿರುವಂತೆ ಪರಿಶೀಲನೆ ಮಾಡುವ ಮತ್ತು ಎಡಿಟ್ ಮಾಡುವ ಆಯ್ಕೆಗಳ ಜೊತೆಗೆ ಪ್ರಶ್ನೆಗಳ ವಿಧ, ಸಂಯೋಜನೆ ಮತ್ತು ಕಠಿಣತೆಯ ಮಟ್ಟ, ಇತ್ಯಾದಿಗಳಂತಹ ಕಸ್ಟಮೈಸ್ ಮಾಡಬಹುದಾದ ದತ್ತಮಾಹಿತಿ (ಇನ್‍ಪುಟ್) ಚಾಲಿತವಾಗಿದೆ ಎಂದು ವಿವರಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ 26 ಮಿಲಿಯನ್ ಶಾಲಾ ವಿದ್ಯಾರ್ಥಿಗಳಿಗೆ ಪ್ರೊಪಲ್ಸಿವ್ (ಬೆಳವಣಿಗೆ ಪ್ರಧಾನ) ಕಲಿಕೆಯನ್ನು ತರಲು ಅಂತರಾಷ್ಟ್ರೀಯ ಮಾನದಂಡದ ಶಿಕ್ಷಣ ವಿಧಾನಗಳ ಜೊತೆಗೆ ಇತ್ತೀಚಿನ ತಂತ್ರಜ್ಞಾನವನ್ನು ಸಂಯೋಜಿಸುವ ಲೀಡ್‍ನ ದೂರದೃಷ್ಟಿಗೆ ಸರಿಯಾಗಿ ಈ ಉಪಕ್ರಮವು ಹೊಂದಿಕೊಂಡಿದೆ. ಪ್ರತಿ ತರಗತಿ ಮತ್ತು ಶಾಲೆಗೆ ಕಸ್ಟಮೈಸೇಶನ್ ಅನ್ನು ಒದಗಿಸುವುದರಿಂದ, ಶಾಲೆಗಳು ಎದುರಿಸಬೇಕಾದ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯ ಭಯವನ್ನು ಸಹ ಇದು ದೂರ ಮಾಡುತ್ತದೆ ಎಂದು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ