ಮಂಗಳೂರು: ಬಾಯಿಯ ಆರೋಗ್ಯದ ನಿಟ್ಟಿನಲ್ಲಿ ಮೈಕ್ರೋಬಯೋಮ್ ಪೋಷಣೆ ಮಾಡುವ ವಿಶಿಷ್ಟ ಆಲ್-ನ್ಯೂ ಗ್ಲಿಸ್ಟರ್ ಬಹುಸಾಮರ್ಥ್ಯದ ಟೂತ್‍ಪೇಸ್ಟ್ ಅನ್ನು ಆಮ್ವೇ ಪರಿಚಯಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 95% ಕ್ಕಿಂತ ಹೆಚ್ಚಿನ ಭಾರತೀಯ ವಯಸ್ಕರು ಹಲ್ಲು ಹುಳುಕು ಸಮಸ್ಯೆಗಳನ್ನು ಅನುಭವಿಸುತ್ತಾರೆ ಮತ್ತು 50%ಕ್ಕಿಂತ ಹೆಚ್ಚಿನ ಜನರು ವಸುಡು ಸಮಸ್ಯೆ, ಹಲ್ಲುಗಳ ಸಂವೇದನೆ ಮತ್ತು ಕೆಟ್ಟ ಉಸಿರಾಟದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ಆರೋಗ್ಯ ಆರೈಕೆಗಾಗಿ ಈ ವಿನೂತನ ಉತ್ಪನ್ನ ಅಭಿವೃದ್ಧಿಪಡಿಸಲಾಗಿದೆ ಎಂದು ಸಿಎಂಒ ಅಜಯ್ ಖನ್ನಾ ಹೇಳಿದ್ದಾರೆ.
ಗ್ರಾಹಕರ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಗ್ಲಿಸ್ಟರ್ ಸ್ಥಿರವಾಗಿ ವಿಕಸನಗೊಂಡಿದ್ದು, ನ್ಯೂ ಗ್ಲಿಸ್ಟರ್‍ನಲ್ಲಿ ಎನಾಮೆಲ್ ವೈಟ್ನಿಂಗ್ ಅನ್ನು ಶೇಕಡ 42 ರಷ್ಟು ಹೆಚ್ಚಿಸಲಾಗಿದ್ದು, ಇದು 12 ಗಂಟೆಗಳ ಕಾಲ ಉಸಿರಾಟವನ್ನು ತಾಜಾಗೊಳಿಸುವುದು, ಪ್ಲೇಕ್ ಕಡಿಮೆಗೊಳಿಸುವುದು ರೀತಿಯ ಬಹು ಪ್ರಯೋಜನಗಳನ್ನು ಒಳಗೊಂಡಿದೆ.
ಇದು ಬಾಯಿ ಆರೈಕೆಯ ಸೂಕ್ಷ್ಮಜೀವಿಯ ಸೂಕ್ಷ್ಮ ಸಮತೋಲನವನ್ನು ಪೋಷಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿದೆ. ಜೊತೆಗೆ ನ್ಯೂಟ್ರಿಲೈಟ್ ಮೂಲ/ಪ್ರಮಾಣೀಕೃತವಾಗಿರುವ ಪುದೀನಾ ಸಾರಭೂತ ತೈಲವನ್ನು ಹೊಂದಿದ್ದು ಉಸಿರಾಟವನ್ನು ತಾಜಾಗೊಳಿಸುತ್ತದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ