ಸಾಹೇಬಾನ್ ಮಂಗಳೂರು ಘಟಕದ ಉದ್ಘಾಟನೆ, ಸಮುದಾಯ ಸಮ್ಮಿಲನ ಕಾರ್ಯಕ್ರಮ

Upayuktha
0


ಮಂಗಳೂರು : ಸಾಹೇಬಾನ್ ವೆಲ್ಫೇರ್ ಟ್ರಸ್ಟ್ (ಎಸ್‌ಡಬ್ಲ್ಯೂಟಿ) ಸಾಹೇಬಾನ್ ಯುಎಇಯ ಒಂದು ಶಾಖೆಯಾಗಿದ್ದು, ಇದು 30 ವರ್ಷಗಳಿಂದ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ, ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸೈಯ್ಯದ್ ಸಿರಾಜ್ ಅಹ್ಮದ್ ಹೇಳಿದ್ದಾರೆ.


ಸಾಹೇಬನ್ ವೆಲ್ಫೇರ್ ಟ್ರಸ್ಟ್ (SWT) ಮಂಗಳೂರು ವತಿಯಿಂದ ಕೊಡಿಯಾಲ್ ಬೈಲ್ ನ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ಶನಿವಾರ ಆಯೋಜಿಸಿದ್ದ 'ಸಾಹೇಬಾನ್ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವ ಉರ್ದು ಮಾತನಾಡುವ ಹನಫಿ ಸಮುದಾಯ) ಘಟಕದ ಉದ್ಘಾಟನೆ ಮತ್ತು ಸಮ್ಮಿಲನʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


“ಸಾಹಿಬಾನ್ ಸಮುದಾಯದ ಹೆಚ್ಚಿನವರು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಭಾರತದ ಇತರ ಭಾಗಗಳಿಗೆ, ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಸಮುದಾಯವು ದೇಶಕ್ಕೆ ಸಮುದಾಯಕ್ಕೆ ಸ್ಫೂರ್ತಿಯ ಮೂಲವಾಗಿರುವ ಸ್ವಾತಂತ್ರ್ಯ ಹೋರಾಟಗಾರರು, ನಾಗರಿಕ ಸೇವೆಯಲ್ಲಿರುವ ಉನ್ನತ ಶ್ರೇಣಿಯ ಅಧಿಕಾರಿಗಳು, ಭಾರತೀಯ ಸಶಸ್ತ್ರ ಪಡೆಯಲ್ಲಿರುವ ಯೋಧರು, ಬ್ಯಾಂಕರ್‌ಗಳು, ನ್ಯಾಯಾಧೀಶರು, ವೃತ್ತಿಪರರು, ವಿದ್ವಾಂಸರು, ಹೆಸರಾಂತ ಕಲಾವಿದರು, ಪ್ರಮುಖ ಉದ್ಯಮಿಗಳನ್ನು ಕೊಡುಗೆಯಾಗಿ ನೀಡಿದೆ” ಎಂದು ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ಅಫ್ರೋಝ್ ಅಸ್ಸಾದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಮುಝಫರ್ ಅಸ್ಸಾದಿ ಅವರು ಸಾಹೇಬ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದರು.

ಖತರ್ನ ಮುಮ್ತಾಝ್ ಹುಸೇನ್ ಅವರು ಉರ್ದು ಸಂಸ್ಕೃತಿ ಮತ್ತು ಭಾಷೆ ಮತ್ತು ಅದನ್ನು ಉತ್ತೇಜಿಸುವ ಮತ್ತು ಪೋಷಿಸುವ ಅಗತ್ಯತೆಯ ಕುರಿತು ಮಾತನಾಡಿದರು.


ಇಮ್ತಿಯಾಝ್ ಖತೀಬ್ ಅವರು SWT ಟ್ರಸ್ಟ್ ಅನ್ನು ಸಭೆಗೆ ಪರಿಚಯಿಸಿ, ಅದರ ಉದ್ದೇಶ ಮತ್ತು ಗುರಿಗಳನ್ನು ವಿವರಿಸಿದರು. ಜಮೀಯ್ಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷ ಶಬಿಹ್ ಅಹ್ಮದ್ ಕಾಝಿ, ಇನ್ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಮಾತನಾಡಿದರು.


ಸಮಾಜಕ್ಕೆ ರಾಷ್ಟ್ರಕ್ಕೆ ಮಹತ್ವದ ಕೊಡುಗೆಗಳಿಗಾಗಿ ಈ ಕೆಳಗಿನವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು:


ಮೇಜರ್ ಡಿ ಎಂ ನಿಝಾಮುದ್ದೀನ್ (ನಿವೃತ್ತ), ಭಾರತೀಯ ಸಶಸ್ತ್ರ ಪಡೆಗಳು ಮತ್ತು ಶೌರ್ಯ ಪದಕ ವಿಜೇತರು.

ಬಿ ಜಿ ಮೊಹಮ್ಮದ್, ಖ್ಯಾತ ಕಲಾವಿದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು(ಮರಣೋತ್ತರ)

ಡಾ.ಸಫ್ವಾನ್ ಅಹಮದ್, ನರರೋಗ ತಜ್ಞ ಹಾಗೂ ಚಿನ್ನದ ಪದಕ ವಿಜೇತ ವೈದ್ಯ

ಡಾ. ಫಾತಿಮಾ ರೈಸಾ, ರೇಡಿಯಾಲಜಿಸ್ಟ್ ಮತ್ತು ಚಿನ್ನದ ಪದಕ ವಿಜೇತೆ ವೈದ್ಯೆ

ಇಲ್ ಹಮ್ ದಾವೂದ್, 2021/22 ನೇ ಸಾಲಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ 2ನೇ ರ್ಯಾಂಕ್ ವಿಜೇತರು.

ಅಲಿಯಾ ಇಮ್ತಿಯಾಝ್ ಖಾನ್, 2022/23ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 4 ನೇ ರ್ಯಾಂಕ್ ವಿಜೇತೆ.

ಮತೀನ್ ಅಹ್ಮದ್, ಹಕ್ ಅಸ್ಸಾದಿ, ಮೆರಾಜ್ ಯೂಸುಫ್, ನಝ್ಮುದ್ದೀನ್ ಅಸ್ಸಾದಿ, ಮೊಹಮ್ಮದ್ ಅಕ್ರಂ, ಆಸಿಫ್ ಇಕ್ಬಾಲ್, ಅಬಿದ್, ಝುಬೇರ್ ಅಂಬರ್ ಸೇರಿದಂತೆ ಪ್ರಮುಖರನ್ನು ಸನ್ಮಾನಿಸಲಾಯಿತು.


ಇಮ್ತಿಯಾಝ್ ಖತೀಬ್ ರವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಆಲಿಯಾ ಇಮ್ತಿಯಾಝ್ ವಂದಿಸಿದರು. ಅಂಶು ಮರ್ಯಮ್ ನಿರೂಪಿಸಿದರು. ಇಕ್ಬಾಲ್ ಮನ್ನಾ, ಟ್ರಸ್ಟಿಗಳಾದ ರಫೀಕ್ ಅಸ್ಸಾದಿ, ಅಲ್ತಾಫ್ ಖತೀಬ್, ಸಾಹಿಲ್ ಝಹೀರ್ ಇದ್ದರು.

ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಗಲ್ಫ್ ದೇಶಗಳಿಂದ ಸಾಹೇಬಾನ್ ಸಮುದಾಯದ 120 ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top