ಹುನಗುಂದ: ನಾಟಕ ಒಂದು ದೃಶ್ಯ ಮಾದ್ಯಮ , ನೈಜ ಕಲೆ, ಅನಾವರಣ ರಂಗಭೂಮಿಯಲ್ಲಿ ಮಾತ್ರ ಸಾಧ್ಯ, ರಂಗಕಲೆ ಜೀವಂತಿಕೆಗೆ ಕಲಾವಿದರ ಕೂಡುಗೆ ಅಪಾರ, ರಂಗಭೂಮಿಗೆ ದೊಡ್ಡ ಇತಿಹಾಸವಿದೆ, ನಾಟಕದಿಂದ ಮನ ಪರಿವರ್ತನೆ, ತತ್ವ ನೀತಿ ಮೌಲ್ಯಗಳ ಬಿತ್ತುವ, ಜೊತೆಗೆ ಸಮಾಜವನ್ನು ತಿದ್ದುವ ಮಹತ್ತರ ಕಾರ್ಯ ಇಂದು ನಾಟಕಗಳು ಮಾಡುತ್ತಿವೆ ಎಂದು ಇಳಕಲ್ ಗುರುಮಹಾಂತ ಶ್ರೀಗಳು ಹೇಳಿದರು.
ಪಟ್ಟಣದ ಹೊನ್ನಗುಂದ ಸಾಹಿತ್ಯ ಸಾಂಸ್ಕೃತಿಕ ಬಳಗ , ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಹೊಸಬ ನಾಟಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಂಗಭೂಮಿ ಸಮಾಜವನ್ನು ನಿರಂತರ ತಿದ್ದುವ ಕಾರ್ಯ ಮಾಡುತ್ತಿದೆ, ನಾಟಕ ಕಲೆ ಉಳಿವಿಗಾಗಿ ಇಂದು ನಾವೆಲ್ಲ ಶ್ರಮಿಸಿ,ನಮ್ಮ ಕಲೆ ಸಂಸ್ಕೃತಿ ಉಳಿಸಿ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಕಲೆ ಸಾಹಿತ್ಯ, ಸಂಸ್ಕೃತಿಗಳ ಪೋಷಿಸುವ ಕಾರ್ಯವಾಗಬೇಕಾಗಿದೆ ಎಂದರು.
ವಿ.ಮ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ಮಹಾಂತೇಶ ಕಡಪಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರೀತಿ ವಿಶ್ವಾಸ, ಮಾನವ ಸಂಬಂಧ, ನಗು ಒತ್ತಡದ ಜೀವನದ ನಡುವೆ ಮಾಯವಾಗುತ್ತಿವೆ, ಮಾನಸಿಕ ಆರೋಗ್ಯ ಸುಧಾರಣೆಗಾಗಿ ಇವತ್ತು ಮನರಂಜನೆ ಅವಶ್ಯವಾಗಿದೆ.ಕಲೆ ಸಾಹಿತ್ಯ ರಚನಾತ್ಮಕ ಚಟುವಟಿಕೆಗಳಿಗೆ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಸದಾ ಪ್ರೋತ್ಸಾಹಿಸುವ ಕಾರ್ಯ ಮಾಡಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಹೊಸಬ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ ವಹಿಸಿದ್ದರು. ತಾಲೂಕ್ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಮುರಳೀಧರ ದೇಶಪಾಂಡೆ, ಎಂ.ಎಸ್.ಮಠ, ಅರುಣ ದುದ್ದಗಿ, ಶ್ರೀ ಶೈಲ ಗೋಲಗೊಂಡ, ಇಮಾಬ ಕರಡಿ, ಮಲ್ಲಿಕಾರ್ಜುನ ದರಗಾದ, ಕೃಷ್ಣ ಜಾಲಿಹಾಳ ಶ್ಯಾಮ ಸುಂದರ ಕುಲಕರ್ಣಿ, ವಿಜಯಲಕ್ಷ್ಮಿ ಗುಡ್ಡದ,ಡಿ.ಎಸ್.ಹವಾಲ್ದಾರ, ಶ್ರೀಮತಿ ಮಾಧವ ದೇಶಪಾಂಡೆ, ಇತರರು ಇದ್ದರು.
ನಿನಾಸಂ ತಂಡದಿಂದ ಚಂದ್ರಶೇಖರ ಕಂಬಾರರ ಹುಲಿಯ ನೆರಳು ನಾಟಕ ಪ್ರದರ್ಶನ ನಡೆಯಿತು. ವಿಜಯ ಕುಲಕರ್ಣಿ ಸಂಗಡಿಗರು ರಂಗಗೀತೆ ಹಾಡಿದರು.ಇಬ್ರಾಹಿಂ ನಾಯಕ ನಿರೂಪಿಸಿ, ವಂದಿಸಿದರು.
-ಮಲ್ಲಿಕಾರ್ಜುನ ಸಜ್ಜನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ