|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾಲೇಖನ ಅಭಿಯಾನ: ರಾಮಾಯಣ ಜ್ಞಾನ ಸತ್ರ- ಸ್ವಸ್ತಿವಾಚನ

ಶ್ರೀರಾಮ ಕಥಾಲೇಖನ ಅಭಿಯಾನ: ರಾಮಾಯಣ ಜ್ಞಾನ ಸತ್ರ- ಸ್ವಸ್ತಿವಾಚನ

 || ಹರೇ ರಾಮ ||



ಪರಮಾಪ್ತರೆ, 

ಸಮಸ್ತ ಸನಾತನ ಹಿಂದೂಗಳಿಗೆ ಸಂಭ್ರಮ- ಹೆಮ್ಮೆಪಡುವ ಸಮಯ; ಕನಸಿನ ಮಾತಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನನಸಾಗಿದ್ದು ನಮ್ಮ ಜೀವಿತಾವಧಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ವಿಚಾರವಾಗಿದೆ.


ಶ್ರೀರಾಮ ನಮ್ಮೆಲ್ಲರ ಬದುಕಿನ ಪರಮೋಚ್ಚ ಆದರ್ಶ. ಶ್ರೀಮನ್ನಾರಾಯಣನೇ ದಿವಿಯಿಂದ ಭುವಿಗೆ ಅವತರಿಸಿದ. ಅವನು ಸಾಗಿದ ಮಂಗಲಮಯ ಮಾರ್ಗವೇ ರಾಮಾಯಣ, ವಾಲ್ಮೀಕಿ ಮಹರ್ಷಿಗಳಿಂದ ನಿರೂಪಿತವಾದ ಈ ರಾಮಕಥಾನಕದ ಅನುಸಂಧಾನ ಮುಕ್ತಿಗೆ ತಾರಕ; ಸಾರ್ಥಕ ಜೀವನಕ್ಕೆ ಪೂರಕ. ಸದ್ವಿಚಾರಗಳ ಸಂಪದ್ಭರಿತ ಗಣಿ, ಸನ್ಮಾರ್ಗ ಸಂಸ್ಕೃತಿಯನ್ನು ಪ್ರವಹಿಸುವ ಸುಧೆ. ಭಾರತೀಯರ ಮನ-ಮನೆಗಳಲ್ಲಿ ಹಾಸು ಹೊಕ್ಕಾಗಿರುವ ಈ ಪುಣ್ಯಚರಿತೆಯಲ್ಲಿ ಅಡಗಿರುವ ವಿಚಾರಧಾರೆಯು ನಾವೀನ್ಯದಲ್ಲಿ ಪ್ರಕಟವಾಗಬೇಕು.


ಸಮಾಜವನ್ನು ಸುಪಥದೆಡೆಗೆ ಕೊಂಡೊಯ್ಯುವಂತಾಗಬೇಕು ಎಂಬ ಅಭಿಲಾಷೆಯಿಂದ ಇದೇ ಮುಂಬರುವ 2024 ಜನವರಿ 22ರ ಉತ್ತರಾಯಣದ ಶುಭ ಅಮೃತ ಘಳಿಗೆಯಲ್ಲಿ ಧರ್ಮದ ಸಾಕಾರ ರೂಪ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಯಲ್ಲಿ ಅಭಿಷಿಕ್ತನಾಗುವ ಶುಭ ಸಂದರ್ಭದಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಮತ್ತು ಉಪಯುಕ್ತ.ಕಾಂ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮಕಥಾ ಲೇಖನ ಅಭಿಯಾನ ಮಾಡುವ ಅಳಿಲು ಸೇವೆಯ ಸಂಕಲ್ಪ ಶ್ರದ್ಧಾವಂತ ಭಕ್ತಜನರ ಸಹಕಾರದಿಂದ ಕಾರ್ಯರೂಪಕ್ಕೆ ಬಂದಿತು.


ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಿರತ ಉಪಯುಕ್ತ.ಕಾಂನಲ್ಲಿ ಮಾಸಾನಾಂ ಮಾರ್ಗಶೀರ್ಷೋಸ್ಮಿ ಎಂದು ಗೀತಾಚಾರ್ಯ ಕೃಷ್ಣ ನುಡಿದಂತೆ ಪುಣ್ಯತಮ ಮಾರ್ಗಶಿರ ಮಾಸದಲ್ಲಿ  2023ರ ಡಿಸೆಂಬರ್ 15ರಿಂದ ಪ್ರತಿದಿನ ಶ್ರೀರಾಮದೇವರ ಲೀಲಾ ಮಹಿಮೆಯ ಕುರಿತು ಪ್ರಾಜ್ಞ ಲೇಖಕರಿಂದ ವೈವಿಧ್ಯಮಯ ವಿಷಯ ಧಾರಾತೀರ್ಥವಾಹಿನಿಯಾಗಿ ಪ್ರಕಟಗೊಳ್ಳಲಿದೆ.


ನಮ್ಮ ಕೋರಿಕೆಯನ್ನು ಮನ್ನಿಸಿ ಶ್ರೀರಾಮಕಥಾ ಲೇಖನ ಅಭಿಯಾನಕ್ಕೆ ಶುಭಾರಂಭವಾಗಿ ತಮ್ಮ ಲೇಖನಾನುಗ್ರಹ ನೀಡಿ ಹರಸಿ- ಹಾರೈಸಿದ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಚರಣಾರವಿಂದಗಳಿಗೆ ನಮನವಿದೋ ಶತಶತ ನಮನಗಳು.


ಮನುಕುಲದ ಸನ್ಮಂಗಲಕ್ಕಾಗಿ ಅವತರಿಸಿ ತನ್ನ ನಡೆ-ನುಡಿ; ಆಚಾರ- ವಿಚಾರ ಗಳಿಂದ ನಿತ್ಯ ಜಂಜಾಟದ ಮಾನವರಿಗೆ ಅನುದಿನದ ಮಾರ್ಗದರ್ಶನ ಮಾಡುತ್ತಿರುವ ಶ್ರೀರಾಮನ ಬಹುಮುಖಿ ವ್ಯಕ್ತಿತ್ವದ ಬಗ್ಗೆ ವಿದ್ವಜ್ಜನರು ತಮ್ಮದೇ ಆದ ಶೈಲಿಯಲ್ಲಿ ಬರೆದು ಈ ಅಭಿಯಾನದ ರಥ ಎಳೆಯುವಲ್ಲಿ ಸಹಕರಿಸಿದ್ದಾರೆ.


ಈ ಲೇಖನ ಯಜ್ಞದಲ್ಲಿ ಭಗವಂತನನ್ನು ಅರ್ಚಿಸು ವುದು ಪೂರ್ವಾರ್ಧವಾದರೇ; ಉತ್ತರಾರ್ಧ ಚಿಂತನ ಮಂಥನಗಳಿಂದ ಕೂಡಿದೆ. ಶ್ರದ್ಧಾ- ಭಕ್ತಿ- ಮುಕ್ತಿಗಳೆಂಬ ಅನುಸಂಧಾನದೊಂದಿಗಿನ ಈ ಲೇಖನ ಕುಸುಮಗಳನ್ನು ಸಕಾಲದಲ್ಲಿ ಒದಗಿಸಿದ ಸನ್ಮಿತ್ರರಿಗೂ, ಓದುತ್ತಿರುವ ವಾಚಕವೃಂದಕ್ಕೂ ಶ್ರೀಸೀತಾರಾಮಚಂದ್ರ ಸ್ವಾಮಿಯ ಕೃಪೆಯು ಅನವರತ ಇರಲೆಂದು ಆಶಿಸುತ್ತೇನೆ.


ಈ ಲೇಖನಗಳನ್ನೂ ಓದಿದಷ್ಟು ಸಲವೂ ರಾಮಾಯಣ ಅಷ್ಟು ಪ್ರಿಯ ವಾಗುತ್ತದೆ. ಜನಸಾಮಾನ್ಯರಿಗೆ ರಾಮಾಯಣದ ಬಗ್ಗೆ ಅಗತ್ಯವಾದ ತಿಳುವಳಿಕೆ ನೀಡುವಲ್ಲಿ, ಓದುಗರ ಜೀವನದಲ್ಲಿ ಗುಣಾತ್ಮಕ ಕಿರು ಬದಲಾವಣೆ ಕಂಡು ಸಹಕಾರಿ ಯಾದರೆ ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ಚಿರನೂತನವಾದ ಕೌಸಲ್ಯ ತನಯನ ಕಥಾಮೃತ ಧಾರೆ ಮನ ಮುಟ್ಟಿ- ಮತಿ ಹೊಕ್ಕಿ ಜೀವನದ ಸತ್ಪಥದೆಡೆಗೆ ಸಾಗುವಂತಾಗಲಿ. ರಾಮನಾಮವೇ ಜೀವನದ ಉಸಿರಾಗಲಿ.



ಸಹೃದಯಿ ಓದುಗ ಮಹಾಶಯರು https://www.upayuktha.com/ ಮತ್ತು https://epaper.upayuktha.com/ ಗಳಲ್ಲಿ ಪ್ರಕಟವಾಗುವ ಈ ಲೇಖನಗಳನ್ನು ಸಾಧ್ಯ ವಾದಷ್ಟು ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾನಾಸಕ್ತರಿಗೆ ತಲುಪಿಸಿ ಜ್ಞಾನ ಪ್ರಸರಣದಲ್ಲಿ ಕೈಜೋಡಿಸಲು ಮನವಿ. 


  ಸ್ವರೂಪೋದ್ಧಾರಕ ಗುರುಗಳಾದ ಕೋಲಾರ ಜಿಲ್ಲೆ ತಂಬಿಹಳ್ಳಿ ಶ್ರೀಮಾಧವ ತೀರ್ಥ ಸಂಸ್ಥಾನದ ಪರಮ ಪೂಜ್ಯ ಶ್ರೀವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರ ಅಮೃತ ದರ್ಶನದ ಅಂತರಂಗದ ತಿಳಿಗೀತೆಗಳ ಈ ನುಡಿಗಳು ಮನನೀಯ.


ಹೋದಕಾಲ ಹಿಂದಿರುಗದು; ಹೋಯ್ತು ಹೋಯ್ತು

ಹೊತ್ತು ಕೇಳೆಂದು ಹೊಡೆಯುತಿಹುದು ಗಂಟೆ

ಮುತ್ತಿನಂದದಿ ಬೆಳಗುವ ಮೂಲ ದೀಪ

ಗಾಳಿ ಬಂದಾರಿ ಹೋಗುವ ಕ್ಷಣಕೆ ಮುನ್ನ

ನಿನ್ನ ಸೇವೆಯ ಮಾಡುವ ನನ್ನ ದೇಹ

ಚಂದನ ದಾರುವಂದದಿ ಸವೆದು ಬಿಡಲಿ

ನಿನ್ನ ಕರುಣೆಗೆನ್ನನು ಪಾತ್ರನನ್ನು  ಮಾಡೊ

ವೀರರಾಮ! ಮಾಂ ಪಾಹಿ ದಿಗ್ವಿಜಯರಾಮ!


ನಿಮ್ಮ ಅಮೂಲ್ಯ ಸಲಹೆ – ಅಭಿಪ್ರಾಯ ಸಹಕಾರ ನಿರೀಕ್ಷೆಯಲ್ಲಿ 


-ಡಾ.ಗುರುರಾಜ ಪೋಶೆಟ್ಟಿಹಳ್ಳಿ 

ಸಂಚಾಲಕರು– ಶ್ರೀರಾಮ ಕಥಾ ಲೇಖನ ಅಭಿಯಾನ– ಉಪಯುಕ್ತ.ಕಾಂ

ಕಾರ್ಯನಿರ್ವಾಹಕರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು, 9739369621



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


1 Comments

  1. ಆತ್ಮೀಯ ಬರಹ, ಆಧ್ಯಾತ್ಮ ದೆಡೆಗೆ ನಮ್ಮನ್ನು ನಡೆಸುತ್ತಲಿದೆ 🙏🙏 ಧನ್ಯವಾದಗಳು

    ReplyDelete

Post a Comment

Post a Comment

Previous Post Next Post