ಉಜಿರೆ: ಜೀವಿ ಸಂಕುಲಕ್ಕೆ ಮೂಲಾಧಾರವೇ ಪ್ರಕೃತಿ. ಹಾಗಾಗಿ ಜೀವಶಾಸ್ತ್ರ ಮತ್ತು ಪರಿಸರ ಶಾಸ್ತ್ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜಿನ ಸಂಸ್ಕøತ ವಿಭಾಗದ ಮುಖ್ಯಸ್ಥ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರಸನ್ನ ಕುಮಾರ್ ಐತಾಳ್ ಹೇಳಿದರು.
ಅವರು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಎಸ್.ಡಿ.ಎಮ್ ವೃಕ್ಷಾಲಯದಲ್ಲಿ ಪರಿಸರ ಪಾಠ ಹೇಳಿದರು.
'ವಿಶೇಷ ಜ್ಞಾನಂ ವಿಜ್ಞಾನಂ' ಹಾಗಾಗಿ ಪರಿಸರದಿಂದ ವಿಶೇಷವಾಗಿ ನಮ್ಮ ಬುದ್ಧಿಗೆ ನಿಲುಕುವಂತಹ ಜ್ಞಾನವೆಲ್ಲವೂ ವಿಜ್ಞಾನವಾಗಿದೆ. ಆಯುರ್ವೇದ ವಿಜ್ಞಾನಕ್ಕೆ ಮೂಲವೇ ಪರಿಸರ ವಿಜ್ಞಾನದ ಕಣ್ಣಿಂದ ಮರೆಯಾದ ಅನೇಕ ನಿಗೂಢ ವಿಚಾರಗಳು ಇನ್ನೂ ನಿಸರ್ಗದಲ್ಲಿ ಅಡಗಿವೆ. ಈಗಿನ ಕಾಲದ ಜೀವಶಾಸ್ತ್ರ ಮತ್ತು ಸಸ್ಯಶಾಸ್ತ್ರದ ವರ್ಗೀಕರಣವನ್ನು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಅದರ ಗುಣಕ್ಕನುಗುಣವಾಗಿ ಆಶ್ವಶಾಸ್ತ್ರ, ಗಜಶಾಸ್ತ್ರ, ಸರ್ಪಶಾಸ್ತ್ರ ಹೀಗೆ ಅನೇಕ ವಿಧವಾಗಿ ವರ್ಗಿಕರಿಸಿದ್ದರು. ಪ್ರಕೃತಿಯೂ ಮಾನವ ಕುಲಕ್ಕೆ ದೊರೆತ ಅದ್ಭುತ ತಾಣ, ಆದ್ದರಿಂದ ಅದರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ. ಅದಕ್ಕಾಗಿಯೇ ಪರಿಸರದ ಪ್ರಾಮುಖ್ಯತೆ ಅದರ ಪೋಷಣೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ನಿಸರ್ಗದ ಮಡಿಲಲ್ಲಿ ಪ್ರಕೃತಿ ಪಾಠವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಂದು ನಾವು ಪರಿಸರ ರಕ್ಷಣೆಗಾಗಿ ಅನೇಕ ಫಲಕಗಳನ್ನು, ನೀತಿಗಳನ್ನು ರೂಪಿಸಿದ್ದೇವೆ. ನಮ್ಮ ಹಿಂದಿನವರು ಸೂರ್ಯ, ಚಂದ್ರ, ವಾಯು, ಜಲ, ವೃಕ್ಷಗಳಲ್ಲಿ ದೇವರನ್ನು ಕಾಣುವ ಮೂಲಕ ಅದರ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪ್ರಕೃತಿಯನ್ನು ದೇವರಂತೆ ಪೂಜಿಸುವ ಇಂತಹ ಅದ್ಭುತ ಆಚರಣೆಯನ್ನು ಭಾರತ ಬಿಟ್ಟು ಬೇರೆಲ್ಲೂ ನಾವು ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.
ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ಅನುರಾಗ್ ಗೌಡ ವಿದ್ಯಾರ್ಥಿಗಳಿಗೆ ಸಸ್ಯೋದ್ಯಾನದಲ್ಲಿರುವ ಸಸ್ಯ ಸಂಕುಲಗಳ ಪರಿಚಯ ಮಾಡಿಕೊಡುವುದರ ಜೊತೆಗೆ ಅದರ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿನಿ ಅಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ