25 ಸಂವತ್ಸರಗಳಿಗೂ ಮಿಗಿಲಾದ ಯೋಗಸೇವೆ ಸ್ತುತ್ಯರ್ಹ: ಜಿತಕಾಮಾನಂದ ಜಿ ಮಹಾರಾಜ್
ಮಂಗಳೂರು: ಮಂಗಳಾದೇವಿಯ ರಾಮಕೃಷ್ಣ ಮಠದ ಸಹಯೋಗದೊಂದಿಗೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಟ್ರಸ್ಟಿನ ಆಶ್ರಯದಲ್ಲಿ ನ.30ರಂದು ಉಡುಪಿ ಮತ್ತು ದಕ್ಷಿಣ ಕನ್ನಡದ ಯೋಗ ಗುರುಗಳಿಗೆ ಸನ್ಮಾನ ಸಮಾರಂಭ ರಜತಾಭಿನಂದನ ನಡೆಯಿತು.
ಈ ಸಂದರ್ಭದಲ್ಲಿಆಯುಷ್ ಇಲಾಖೆಯ ಡಾ. ಇಕ್ಬಾಲ್ ಭಾಗವಹಿಸಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗದ ಅರಿವನ್ನು ಯುವ ಜನರಿಗೆ ಮೂಡಿಸುತ್ತಿರುವ ಯೋಗ ಗುರುಗಳನ್ನು ಗೌರವಿಸುವುದು ತಮ್ಮ ಕನಸು ಹಾಗೂ ನಿರಂತರವಾಗಿ ಯೋಗ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಯೋಗ ಗುರುಗಳನ್ನು ಇನ್ನು ಮುಂದೆಯೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ತಮ್ಮ ಉದ್ದೇಶ ಎಂದು ಹೇಳಿದರು.
ಆಶೀರ್ವಚನ ನೀಡಿದ ಜಿತಕಾಮಾನಂದಜಿ ಮಹಾರಾಜ್ ಅವರು, ಆಶ್ರಮ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳಲ್ಲಿ ಯೋಗ ತರಬೇತಿಯು ಮಹತ್ವವಾದದ್ದು. ಆಶ್ರಮದೊಂದಿಗೆ ಸೇವೆಯಲ್ಲಿ ಕೈಜೋಡಿಸುತ್ತಿರುವ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಸೇವೆಗೆ ದೇವರು ಹರಸಲಿ ಎಂದು ಶುಭ ಹಾರೈಸಿದರು. ವೀಣಾ ಪ್ರಾರ್ಥಿಸಿದರು. ಡಾ. ಸಂತೋಷ್ ಆಳ್ವ ನಿರೂಪಿಸಿದರು.
ಕರುಣಾಕರ ಉಪಾಧ್ಯಾಯ, ಆನಂದ ಶೆಟ್ಟಿ, ಸತ್ಯನಾರಾಯಣ ಪ್ರಸಾದ್, ಬಿ ಕಿರಣ್ ಕುಮಾರ್, ಹೆಚ್.ಎಸ್. ಶಿವರಾಯ, ಡಾ.ಕೆ.ಕೃಷ್ಣ ಶರ್ಮ, ಡಾ.ವಿ ಗಣೇಶ್ ಭಟ್, ಕುಂಬ್ರೇಕರ್ ಮೋಹನ್ ಕುಮಾರ್, ರಾಜಮಣಿ ರಾಮಕುಂಜ, ಪಿ ಪೂವಪ್ಪ, ಎಂ.ಕೃಷ್ಣ ಭಟ್, ವಿ ಎಲ್. ರೇಗೊ, ಡಾ. ಐ ಶಶಿಕಾಂತ್ ಜೈನ್, ರಾಮಣ್ಣ ರೈ, ಎಮ್ ಸಂಜೀವ ಪಿ, ರಾಧಾಕೃಷ್ಣ ಶೆಟ್ಟಿ, ಡಾ.ಮಾಲತಿ ಪೈ, ಕೆ.ಎಸ್.ಪ್ರತಿಮ್ ಕುಮಾರ್, ಶ್ರೀಮತಿ ಸತ್ಯಭಾಮಾ ಭಟ್, ಎಮ್ ಸಂಜೀವ ಮೊಗವೀರ, ಬಿ. ಶ್ರೀಧರ, ಅಶೋಕ್‌ಕುಮಾರ್ ಕೆ, ಪಿ. ವೇಣುಗೋಪಾಲ್ ಭಟ್, ಶೇಖರ ಕಡ್ತಲ, ಅಶೋಕ ಸಿ. ಪೂಜಾರಿ, ಶ್ರೀಮತಿ ಜಯಶ್ರೀ, ಕೆ. ನರೇಂದ್ರ ಕಾಮತ್, ಎಸ್. ನಿತ್ಯಾನಂದ ಪೈ, ಶಂಕರ ನಾಯ್ಕ ಈ ಗಣ್ಯರು ರಜತಾಭಿನಂದನೆ ಸ್ವೀಕರಿಸಿದರು.
ಡಾ. ಸುರೇಶ್ ದೇಲಂಪಾಡಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸ್ತುತ ಜೀವನದಲ್ಲಿ ಯೋಗಾಭ್ಯಾಸದ ಮಹತ್ವವನ್ನು ವಿವರಿಸಿ, ಅದರಿಂದ ಒದಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು 25 ವರ್ಷ ಮೇಲ್ಪಟ್ಟ ನಿರಂತರ ಯೋಗ ತರಬೇತಿಯಲ್ಲಿ ತೊಡಗಿಸಿಕೊಂಡ ಹಿರಿಯ ಸಾಧಕರನ್ನು ಗುರುತಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಹಾಗೂ ಈ ಒಂದು ಹಿರಿಯ ಯೋಗ ಸಾಧಕರ ಯೋಗತರಬೇತಿಯಾಗಲಿ ಅವರ ಮಾರ್ಗದರ್ಶವು ಈಗಿನ ಯುವ ಯೋಗ ಶಿಕ್ಷಕರಿಗೆ ದಾರಿದೀಪವಾಗಿದೆ. ಇದೊಂದು ಅತ್ಯುತ್ತಮವಾದ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿನ ಪ್ರಾಂಶುಪಾಲರಾದ ಅರುಣಾ ಕಾಮತ್ ಹಾಗೂ ವಾಮದಪದವು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಮಹೇಶ್ ಉಪಸ್ಥಿತರಿದ್ದರು.
ದೇಲಂಪಾಡಿ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುತ್ತಿರುವ ಯೋಗ ತರಬೇತಿಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸರ್ವ ವಿಧದಿಂದಲೂ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ