ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

Upayuktha
0


ಮಂಗಳೂರು: 2023ರಲ್ಲಿ ಜರಗಿದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ ಕಾಮತರ ಗೆಲುವಿಗಾಗಿ ಹಾಗೂ 2024ನೇ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಬೇಕೆಂದು ಪ್ರಾರ್ಥಿಸಿ ಮಿಲಾಗ್ರಿಸ್ ವಾರ್ಡಿನ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಿಕೊಂಡಂತೆ ಇಂದು ಬೆಳಿಗ್ಗೆ 5 ಗಂಟೆಗೆ ಮೇಲಿನಮೊಗರು ಬಳಿಯಿಂದ ಹೊರಟು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಶಾಸಕ ಕಾಮತ್ ಅವರ ಉಪಸ್ಥಿತಿಯಲ್ಲಿ ಪೂಜೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ ಹೆಗ್ಡೆ,ಮಂಡಲ ಕಾರ್ಯಕಾರಿ ಸದಸ್ಯರಾದ ಮೋಹನ್ ಪೂಜಾರಿ, ಮಂಡಲ ಕಾರ್ಯದರ್ಶಿ ಲಲೇಶ್ ಕುಮಾರ, ಬಿಜೆಪಿ ಪ್ರಮುಖರಾದ ನಿಲೇಶ್ ಕಾಮತ್, ಪ್ರಶಾಂತ್ ಮರೋಳಿ, ಮಿಲಾಗ್ರಿಸ್ ವಾರ್ಡ್ ಶಕ್ತಿ ಕೇಂದ್ರ ಪ್ರಮುಖರಾದ ಮಂಜುನಾಥ ಅತ್ತಾವರ, ಮಿಲಾಗ್ರಿಸ್ ವಾರ್ಡ್ ಬಿಜೆಪಿ ಪ್ರಮುಖರಾದ ಶಬರೀಶ್, ಶಿವಪ್ರಸಾದ್ ಕಿಲ್ಲೆ, ಶರತ್ ಕುಮಾರ್, ಅಶೋಕ್ ಕುಮಾರ್, ನರೇಂದ್ರ ಸುವರ್ಣ, ಗಿರೀಶ್, ರಾಹುಲ್, ಹಾಗೂ ಶ್ರೀಮತಿ ಸಂಧ್ಯಾ ಮೋಹನ್, ಶ್ರೀಮತಿ ಶೈಲಾ ಚಂದ್ರಹಾಸ್, ಶ್ರೀಮತಿ ಸಾಯಿರಾ ವಿಜಯ್, ಭುವನ್, ಹೃಷಿಕೇಶ್, ಕಾರ್ತಿಕ್, ನಿಖಿಲ್, ಸೂರಜ್ ಮತ್ತು ಅರ್ಜುನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top