ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್

Upayuktha
0

  • ಸತತ 21ನೇ ಬಾರಿ ಆಳ್ವಾಸ್‌ಗೆ ಸಮಗ್ರ ಚಾಂಪಿಯನ್‌ಶಿಫ್
  • ಒಟ್ಟು 77 ಪದಕಗಳೊಂದಿಗೆ ದಾಖಲೆಯ 506 ಅಂಕಗಳ ಸಮಗ್ರ ಚಾಂಪಿಯನ್ ಪಟ್ಟ




ವಿದ್ಯಾಗಿರಿ: ಆರು ನೂತನ ಕೂಟ ದಾಖಲೆಗಳು, 440ಕ್ಕೂ ಅಧಿಕ ಅಂಕಗಳ ಅಂತರದ ಜಯದೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮುಡಿಗೇರಿಸಿಕೊಂಡಿದ್ದು, ಸತತ 21ನೇ ಬಾರಿಗೆ   ಚಾಂಪಿಯನ್‌ಶಿಪ್ ಪಡೆದ ಕೀರ್ತಿಗೆ ಪಾತ್ರವಾಯಿತು. 


ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ 259 ಹಾಗೂ ಮಹಿಳೆಯರ ವಿಭಾಗದಲ್ಲಿ 247 ಅಂಕ ಪಡೆದ ಆಳ್ವಾಸ್ ಒಟ್ಟು 506 ಅಂಕಗಳೊAದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. 


ಪುರುಷರ ವಿಭಾಗದಲ್ಲಿ 50 ಅಂಕ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ 56 ಅಂಕ ಪಡೆದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮದರ್ಜೆಕಾಲೇಜು ರನ್ನರ್‌ಅಫ್ ಪ್ರಶಸ್ತಿಗಳನ್ನು ಪಡೆದವು. 


ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 22 ಚಿನ್ನ 15 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿ ಒಟ್ಟು 40 ಹಾಗೂ ಮಹಿಳಾ ವಿಭಾಗದಲ್ಲಿ 22 ಚಿನ್ನ, 13 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ 37 ಪದಕ ಪಡೆಯಿತು. ಒಟ್ಟು 77 ಪದಕಗಳನ್ನು ಪಡೆಯಿತು.  


ವೈಯಕ್ತಿಕ: ಕ್ರೀಡಾಕೂಟದ ಪುರುಷರ ಹಾಗೂ ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಸಂನೀಶ್ ಪಿ.ಎಸ್. ಹಾಗೂ ಅಂಜಲಿ ಪಡೆದುಕೊಂಡರು. 


ಕೂಟ ದಾಖಲೆ:

ಈ ಬಾರಿಯ 6 ದಾಖಲೆಗಳ ಜೊತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ವರೆಗೆ ದಾಖಲಾದ ಒಟ್ಟು 48 ದಾಖಲೆಗಳ ಪೈಕಿ 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಹೆಸರಿನಲ್ಲಿರುವುದು ಉಲ್ಲೇಖನೀಯ. 


ಮಹಿಳೆಯರ ವಿಭಾಗದಲ್ಲಿ ಬಸಂತಿಕುಮಾರಿ (5000 ಮೀಟರ್‌ಓಟ- 17 ನಿಮಿಷ 41.8 ಸೆಕೆಂಡು) ಅನುಷಾ (ಡಿಸ್ಕಸ್‌ಥ್ರೋ-48.45 ಮೀಟರ್), ಅಂಜಲಿ (ಶಾಟ್‌ಪಟ್-14.29 ಮೀಟರ್), ಶ್ರುತಿ  (ಹ್ಯಾಮರ್‌ಥ್ರೋ- 56.20 ಮೀಟರ್), ಸಿಂಧೂಶ್ರೀ (ಪೋಲ್ ವಾಲ್ಟ್- 3.60 ಮೀಟರ್) ಹಾಗೂ ಪುರುಷರ ವಿಭಾಗದಲ್ಲಿ ಸಾವನ್ (ಶಾಟಪಟ್- 17.82 ಮೀಟರ್) ನೂತನ ಕೂಟದಾಖಲೆ ಬರೆದರು. 


ಆಳ್ವಾಸ್ ಕಾಲೇಜಿನ ಒಟ್ಟು 40 ಪುರುಷ ಹಾಗೂ 31 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 71 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಕ್ರೀಡಾಕೂಟದಲ್ಲಿ ಪದಕ ಪಡೆದ ಪುರುಷ ಕ್ರೀಡಾಪಟುಗಳು ತಮಿಳುನಾಡು (ಪುರುಷ) ಹಾಗೂ ಭುವನೇಶ್ವರ (ಮಹಿಳಾ) ನಡೆಯಲಿರುವ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಕ್ರೀಡಾಕೂಟದಲ್ಲಿ ಪಾಲ್ಗೊಂಡ  ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ದತ್ತು ಯೋಜನೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 


ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅಭಿನಂದಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top