ಲಕ್ಷದೀಪೋತ್ಸವದಲ್ಲಿ ಚಂದ್ರಯಾನ- 4 ಬಗ್ಗೆ ಸುಳಿವು ನೀಡಿದ ಇಸ್ರೋ ನಿರ್ದೇಶಕ ರಾಮಕೃಷ್ಣ ಬಿ.ಎನ್

Upayuktha
0

 



ಧರ್ಮಸ್ಥಳ : ಭಾರತದ ಮುಂದಿನ ಗುರಿ ಚಂದ್ರಯಾನ - 4  ನ್ನು ಯಶಸ್ವಿಗೊಳಿಸುವುದು  ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ನಿರ್ದೇಶಕರು  ಮತ್ತು ವಿಜ್ಞಾನಿಗಳಾದ  ರಾಮಕೃಷ್ಣ ಬಿ.ಎನ್ ಅವರು ಅಭಿಪ್ರಾಯಪಟ್ಟರು. 



ಶ್ರೀ ಕ್ಷೇತ್ರ ಧರ್ಮಸ್ಥಳ  ಲಕ್ಷದೀಪೋತ್ಸವದ ಸಂದರ್ಭದಲ್ಲಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ  ಮಂಗಳವಾರದಂದು  ಜರುಗಿದ 91ನೇಯ ಸಾಹಿತ್ಯ ಸಮ್ಮೇಳನ ಅಧಿವೇಶನವನ್ನು  ಉದ್ಘಾಟಿಸಿ ಮಾತನಾಡಿದರು.



ದೈವತ್ವದ ಕೃಪೆ ಮತ್ತು ಮನುಷ್ಯ ಶ್ರಮದ ಪ್ರತಿಫಲವಾಗಿ ಚಂದ್ರಯಾನ- ಯಶಸ್ವಿಯಾಯಿತು. ಅತ್ಯಂತ ಸವಾಲಿನ ಸನ್ನಿವೇಶವನ್ನು ಎದುರಿಸಲು ನಮ್ಮಲ್ಲಿನ ಶ್ರದ್ಧಾರೂಪಿ ಆತ್ಮವಿಶ್ವಾಸವೇ ಕಾರಣವಾಯಿತು. ಹೀಗಾಗಿ ಯಶಸ್ಸನ್ನು ಪಡೆಯಲು ನಿಷ್ಠೆ, ನಂಬಿಕೆ ಮತ್ತು ನಿರಂತರತೆಯ ಸೂತ್ರದಲ್ಲಿ ನಂಬಿಕೆಯಿಡೋಣ.  ಶಿವನ ಶಿಖೆಯಲ್ಲಿ ಚಂದ್ರನಿದ್ದಾನೆ. ಇಸ್ರೋದ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ಕೂಡ  ಶಿವಶಕ್ತಿ ಪಾಯಿಂಟ್ ಎಂದು ಗುರುತಿಸಿದ್ದೇವೆ. ದಕ್ಷಿಣಾರ್ಧಗೋಳದಲ್ಲಿ ಮೊಟ್ಟಮೊದಲು ಲ್ಯಾಂಡ್ ಮಾಡಿದ ವಿಶ್ವದ ಮೊದಲ ರಾಷ್ಟ್ರವಾದ ಭಾರತದ ಹೆಗ್ಗಳಿಕೆಯನ್ನು  ಸ್ಮರಿಸಿದರು. 



ಕನ್ನಡ ಸಾಹಿತ್ಯಕ್ಕೂ ಮತ್ತು ವಿಜ್ಞಾನಕ್ಕೂ ಬಲು ಹಿಂದಿನಿಂದ ಅವಿನಾಭಾವ ಸಂಬಂಧವಿದೆ. ನಮ್ಮ ವೇದಗಳಲ್ಲಿ ಉಲ್ಲೇಖವಾಗಿರುವ ಸ್ತೋತ್ರಗಳು ವಿಜ್ಞಾನವನ್ನು ಬೋಧಿಸುತ್ತವೆ. ಶತಮಾನಗಳ ವಸಾಹತುಶಾಹಿತ್ವದ ನೆರಳಿಂದ ಹೊರಬರುತ್ತಿರುವ ಭಾರತ ತನ್ನ ಮೊದಲಿನ ವೈಭವವನ್ನು ಕಂಡುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳು ಕಾರ್ಯನಿರ್ವಹಿಸಲಿ ಎಂದು ಆಶಯ ವ್ಯಕ್ತಪಡಿಸಿದರು.



ಖ್ಯಾತ ವಿದ್ವಾಂಸರು ಮತ್ತು ಗಮಕಿಗಳಾದ ಡಾ.ಎ.ವಿ. ಪ್ರಸನ್ನ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಬರಹಗಾರರಾದ ಶ್ರೀಪಾದ ಶೆಟ್ಟಿ, ರಂಗಕರ್ಮಿಗಳಾದ ಪ್ರಕಾಶ್ ಬೆಳವಾಡಿ ಮತ್ತು ಲೇಖಕರಾದ ಅಜಕ್ಕಳ ಗಿರೀಶ ಭಟ್ ಸೇರಿದಂತೆ ಇತರೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.  




- ಸೋಮೇಶ್ವರ ಆರ್ ಗುರುಮಠ,

ಎಸ್.ಡಿ.ಎಂ. ಕಾಲೇಜು ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Advt Slider:
To Top