ಕಾಸರಗೋಡು: ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಮಹೋತ್ಸವವು ನಡೆಯಲಿದ್ದು, ಈ ಬಗ್ಗೆ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಸಮಾಲೋಚಿಸಲು ಪುನರ್ ನಿರ್ಮಾಣ ಸಮಿತಿ ಕಾರ್ಯಕಾರಿ ಸಮಿತಿ ಸಭೆಯು ಡಿ.14 ರಂದು ಗುರುವಾರ ಶ್ರೀ ಕ್ಷೇತ್ರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರಗಿಸಲು ಆಚರಣಾ ಸಮಿತಿಯ ರೂಪೀಕರಣಕ್ಕೆ ಊರ ಪರವೂರ ಮಹನೀಯರನ್ನೊಳಗೊಂಡು ಬೃಹತ್ ಸಭೆಯನ್ನು ಜ.7ರಂದು ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶ್ರೀ ವಾಮನ ಆಚಾರ್ಯ ಅಧ್ಯಕ್ಷಸ್ಥಾನ ವಹಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಸುಂದರ ಗೋಳಿಯಡ್ಕ, ಕರುಣಾಕರ ಮಾಸ್ಟರ್, ವಿಷ್ಣುಮೋಹನ ಭಟ್ ಐಲ್‌ಕುಂಜೆ, ಗೋವಿಂದ ಬಳ್ಳಮೂಲೆ, ಪ್ರಭಾಕರನ್, ಹರಿಶ್ಚಂದ್ರ ರಾವ್ ಗೋಳಿಯಡ್ಕ ಇವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಧಾಕೃಷ್ಣ ಗೋಳಿಯಡ್ಕ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಮಣಿಕಂಠ ಪ್ರಸಾದ್ ಗೋಳಿಯಡ್ಕ ಧನ್ಯವಾದವಿತ್ತರು. ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ