ನಿಂದನೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಆಕ್ರೋಶ
ಕಾವೂರು: ರಾಜಕಾರಣಿಗಳ ವಿರುದ್ದ ಜನರ ಟೀಕೆ ಸಾಮಾನ್ಯ. ಅದನ್ನು ಅರಗಿಸಿಕೊಂಡು ರಾಜಕಾರಣ ಮಾಡುವ ಉದಾರ ಮನಸ್ಸು ಬೆಳೆಸಿಕೊಳ್ಳಿ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನೀವೇನು ಸರ್ವಾಧಿಕಾರಿಗಳಾ? ನಿಂದನೆ ಮಾಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿ ಕಾರ್ಯಕರ್ತರಲ್ಲಿ ಭೀತಿ ಮೂಡಿಸುವ ನಿಮ್ಮ ಕುತಂತ್ರವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಡಾ.ಭರತ್ ಶೆಟ್ಟಿ ವೈ ಗುಡುಗಿದ್ದಾರೆ.
ಮೋದಿ, ಯೋಗಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾದರೆ ನಿಂದನೆಯ ಮಹಾಪೂರ ಹರಿದು ಬರುತ್ತದೆ. ಇದರ ವಿರುದ್ದ ಬಿಜೆಪಿ ಕಾರ್ಯಕರ್ತರು ಕೇಸು ದಾಖಲಿಸುತ್ತಾ ಹೋದರೆ ಠಾಣೆಯಲ್ಲಿ ಇರುವ ಸೆಲ್‌ಗಳು ಸಾಕಾಗದು. ಸಾಮಾನ್ಯರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ವಾರಗಟ್ಟಲೆ ಸತಾಯಿಸುವ ಪೊಲೀಸ್ ಇಲಾಖೆ, ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿರುವಂತೆ ಕಾಣುತ್ತದೆ. ಹೆಚ್ಚು ದಿನ ಇಂತಹ ಕಳ್ಳ- ಪೊಲೀಸ್ ಆಟ ನಡೆಯಲಾರದು ಎಂದು ಎಚ್ಚರಿಸಿದ್ದಾರೆ. ಮಾತ್ರವಲ್ಲದೆ ಬಿಜೆಪಿ ಕಾರ್ಯಕರ್ತನ ಪರ ಪಕ್ಷ ಹಾಗೂ ವೈಯಕ್ತಿಕವಾಗಿ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ