ಪುತ್ತೂರು: 'ಮನೆಗೆ ಒಂದಿರಲಿ ಕಾಡುಕಿತ್ತಳೆ ಗಿಡ' ಎಂಬ ಲೇಖನ ಅಡಿಕೆ ಪತ್ರಿಕೆ ಪ್ರಕಟಿಸಿದ್ದು ನವೆಂಬರ್ ತಿಂಗಳಲ್ಲಿ. ಅದಕ್ಕೂ ಒಂದು ತಿಂಗಳ ಮೊದಲು ಕಾಡುಕಿತ್ತಳೆಯ ಸಂರಕ್ಷಣೆಯ ಬಗ್ಗೆ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕತೊಡಗಿದ್ದೆವು.
ತಕ್ಷಣ ಜಾಗೃತವಾದ ಸುಳ್ಯದ ನಾಮಾಮಿ (ನಾಡ ಮಾವಿನ ಮಿತ್ರರು) ಗುಂಪು ಇಂದು (ಡಿ.3) ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಈ ಗಿಡಗಳ ಲೋಕಾರ್ಪಣೆ ಮಾಡಿತು. ಈ ಸಂಘಟನೆ ಈ ವರೆಗೆ ನೇರವಾಗಿ ತಿನ್ನಬಹುದಾದ ಮೂರು ಬಗೆಯ ನಾಯಿಕಿತ್ತಳೆ (ಈ ಹೆಸರು ಇಷ್ಟವಾಗದಿದ್ದರೆ ನಾಕಿತ್ತಳೆ, ಸುಳ್ಯ ಕಿತ್ತಳೆ, ಬಂಟಮಲೆ ಕಿತ್ತಳೆ– ಅಥವಾ ಇನ್ಯಾವುದೇ ಹೆಸರಲ್ಲಿ ಕರೆಯಿರಿ) ಮರಗಳನ್ನು ಗುರುತಿಸಿ, ಅವುಗಳ ಕಸಿ ಗಿಡ ತಯಾರಿಸಿ, ತಗೊಳ್ಳಿ,
ತಗೊಳ್ಳಿ. ವಿನಾಶದ ಅಂಚಿನಲ್ಲಿದ್ದ ನಾಕಿತ್ತಳೆ (ಕಾಡುಕಿತ್ತಳೆ) ಎರಡೇ ತಿಂಗಳುಗಳಲ್ಲಿ ಊರಿನ ಹಣ್ಣುಪ್ರಿಯರ ಮನೆಯಂಗಳ ಅಲಂಕರಿಸಲು ತಯಾರು! ಭಲೇ ನಾಮಾಮಿ.
ದ.ಕ.ದಲ್ಲಿ ಮುಂದಿನ ಡಿಸೆಂಬರ್‌ನೊಳಗೆ ನಾಮಾಮಿಯವರ ಕ್ರಿಯಾಶೀಲತೆಯಿಂದ ಕನಿಷ್ಠ ಐನೂರು ನಾಕಿತ್ತಳೆ ಕಸಿಗಿಡಗಳು ಆಸಕ್ತರ ಅಂಗಳದಲ್ಲೂ ಬೇರು ಬಿಟ್ಟಾವು ಅನಿಸುತ್ತದೆ.
- ಶ್ರೀಪಡ್ರೆ,
ಅಡಿಕೆ ಪತ್ರಿಕೆ ಸಂಪಾದಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ