ಬಂಟ್ವಾಳ: ಸಾಮಾಜಿಕ ಸ್ವಚ್ಛತಾ ಅಭಿಯಾನ, ಜೀವನ ಮೌಲ್ಯಗಳ ಪುಸ್ತಕ ಅನಾವರಣ

Upayuktha
0


ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್‌ ಬಂಟ್ವಾಳ ತಾಲೂಕು ಘಟಕ ಹಾಗೂ ಮಕ್ಕಳ ಕಲಾಲೋಕದ ವತಿಯಿಂದ ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಹಾಗೂ ಜೀವನ ಮೌಲ್ಯಗಳ ಪುಸ್ತಕಗಳ ಅನಾವರಣ ಕಾರ್ಯಕ್ರಮ ಶನಿವಾರ (ಡಿ.2) ಬಿ.ಸಿ ರೋಡ್ ಕನ್ನಡ ಭವನದಲ್ಲಿ ನಡೆಯಿತು.


ಕಸಾಪ ದ.ಕ ಜಿಲ್ಲಾಧ್ಯಕ್ಷ ಪ್ರೊ. ಶ್ರೀನಾಥ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿ ಶಿವಪ್ರಸಾದ ಬೋಳಂತೂರು ಅಭಿಯಾನದ ಉದ್ಘಾಟನೆ ನೆರವೇರಿಸಿದರು. ಓಜಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕು. ಶ್ರುತಿಕಾ ಬಾಯಾರು ಪುಸ್ತಕ ಅನಾವರಣ ಮಾಡಿದಳು.


ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ವಿ.ಬಿ ಕುಳಮರ್ವ, ಕುಂಬಳೆ ಇವರು ಭಾಗವಹಿಸಿ ಮಾತನಾಡಿದರು. "ಸಾಮಾಜಿಕ ಸ್ವಚ್ಛತಾ ಅಭಿಯಾನದ ಉದ್ದೇಶ ಜೀವನಮೌಲ್ಯಗಳ ತಳಹದಿಯಲ್ಲಿ ಬಂದಾಗ ಅದಕ್ಕೆ ವಿಶಿಷ್ಟವಾದ ಅರ್ಥವಿದೆ. "ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಚತೆ" ಎಂಬ ಕಲ್ಪನೆಯೇ ಬಹಳ ಮಹತ್ವಪೂರ್ಣವಾದುದು. ಅಂತರಂಗ ಸ್ವಚ್ಛವಾಗಿರುವವರಿಗೆ ಇದು ಸುಲಭಸಾಧ್ಯ' ಎಂದು ಅವರು ನುಡಿದರು.


ಸಮಾರಂಭದಲ್ಲಿ ಅನಾವರಣ ಮಾಡಲಾದ ಸಾಮಾಜಿಕ ಜಾಗೃತಿಯ ಪುಸ್ತಕವನ್ನು ಭಾಸ್ಕರ ಅಡ್ವಳ ಅವರು ರಚಿಸಿದ್ದಾರೆ.


ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಸಹನಾ ಕೋಲ್ಪೆ ಸ್ವಾಗತಿಸಿ, 10ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಸಾಬಿತ್ ನಿರ್ವಹಣೆ ಹಾಗೂ ಕಲ್ಲಡ್ಕದ ದಕಜಿಪಂ ಮಾದರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಕಲ್ಲಡ್ಕ ಧನ್ಯವಾದ ಸಮರ್ಪಣೆ ನೆರವೇರಿಸಿದರು. ಕೇಪು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಅಕ್ಷಿತಾ ಮುಳಿಯ, ಹರ್ಷಿತಾ ಮಣಿಯರಪಾದೆ, ಪೃಥ್ವಿ ಉಬರು ಸ್ಫೂರ್ತಿ ಗೀತೆ ಹಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top