ಕಾಸರಗೋಡು: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಬಯಲಾಟ ಸಮಿತಿಯ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಕೋಟೂರಿನಲ್ಲಿ 27 ಡಿಸೆಂಬರ್ 2023 ಬುಧವಾರದಂದು "ಚಕ್ರವ್ಯೂಹ- ದಮಯಂತೀ ಪುನಃ ಸ್ವಯಂವರ" ಎಂಬ ಪುರಾಣಕಥಾಭಾಗದ ಯಕ್ಷಗಾನ ಬಯಲಾಟವು ಸಂಪನ್ನವಾಯಿತು.
ಶ್ರೀಮದೆಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಚಿತ್ತೈಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಸಮಾರಂಭಕ್ಕೆ ಶುಭಹಾರೈಸಿದರು.
ಬೆಳಗ್ಗೆ ಗಣಹೋಮ, ಮಧ್ಯಾಹ್ನಪೂಜೆ, ಸಂಜೆ ಶ್ರೀ ಗಣಪತಿದೇವರ ಮಾಹಾಪೂಜೆ ಜರಗಿ ಬಳಿಕ ಶ್ರೀ ದೇವರ ಮೆರವಣಿಗೆಯು ಭಜನೆ ಘೋಷಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಯೂ ಜರಗಿತು.
ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮತ್ತು ಸಹಸ್ರ ಸಂಖ್ಯೆಯ ಕಲಾಭಿಮಾನಿಗಳ ಪ್ರೋತ್ಸಾದಿಂದ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಗಿ ಯಶಸ್ವಿಯಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ